ಚಿಕ್ಕಬಳ್ಳಾಪುರ :ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರವಾಗಿ ಜಿಲ್ಲೆಯಲ್ಲಿ 1.19 ಕೋಟಿಗೂ ಹೆಚ್ಚು ಪರಿಹಾರ ಹಣವನ್ನು ರೈತರ ಖಾತೆಗೆ ಸರ್ಕಾರ ಈಗಾಗಲೇ ಜಮೆ ಮಾಡಿದೆ. ಉಳಿದ ರೈತರಿಗೂ ಸದ್ಯದಲ್ಲೇ ಪರಿಹಾರ ಹಣ ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ಎನ್. ಎಂ. ನಾಗರಾಜ್ ಅವರು ತಿಳಿಸಿದ್ದಾರೆ .
BIGG NEWS : ಈ ವರ್ಷ ಹಂಪಿ ಉತ್ಸವ ಅದ್ಧೂರಿ ಆಚರಣೆ : ಸಚಿವೆ ಶಶಿಕಲಾ ಜೊಲ್ಲೆ
ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿ ಮಾತನಾಡುತ್ತಾ, ಸರ್ಕಾರದ ನಿರ್ದೇಶನದಂತೆ ಕಳೆದೆರಡು ತಿಂಗಳಿಂದ ಜಿಲ್ಲೆಯಲ್ಲಿ ಉಂಟಾದ ಮಳೆ ಹಾನಿಗೆ ಪರಿಹಾರ ನೀಡಲು ಜಿಲ್ಲೆಯಾದ್ಯಂತ ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ತುರ್ತು ಜಂಟಿ ಸಮೀಕ್ಷೆ ನಡೆಸಿ ಪರಿಹಾರ ಪೋರ್ಟಲ್ ನಲ್ಲಿ ನೋಂದಣಿಯಾಗಿರುವ ಪೈಕಿ 1,326 ನೋಂದಣಿಗಳನ್ನು ಅನುಮೋದನೆ ಮಾಡಿ ಈ ಪೈಕಿ ಈ ಜಿಲ್ಲೆಯ 866 ರೈತ ಫಲಾನುಭವಿಗಳ 37,756 ಗುಂಟೆ ನೀರಾವರಿ ಬೆಳೆ ಜಮೀನಿಗೆ ಹಾಗೂ 988 ಗುಂಟೆ ದೀರ್ಘಕಾಲಿಕ ತೋಟಗಾರಿಕೆ ಬೆಳೆಗಳಿಗೆ ಮತ್ತು 16, 358 ಗುಂಟೆ ಮಳೆಯಾಶ್ರಿತ ಕೃಷಿ ಬೆಳೆಗಳಿಗೆ ಒಟ್ಟಾರೆ ಜಿಲ್ಲೆಯಲ್ಲಿ ಮಳೆಹಾನಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ 1.19 ಕೋಟಿಗೂ ಹೆಚ್ಚು ಪರಿಹಾರ ಹಣ ಈಗಾಗಲೇ ರೈತರ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ವರ್ಗಾವಣೆ ಮಾಡಲಾಗಿದೆ.ಇನ್ನು ಬಾಕಿ ಇರುವ ರೈತ ಸಂತ್ರಸ್ತರಿಗೆ ಸದ್ಯದಲ್ಲೇ ಪರಿಹಾರ ಹಣ ಜಮೆಯಾಗಲಿದೆ .ಪರಿಹಾರ ಹಣ ಜಮೆಯಾಗದ ರೈತರು ಯಾವುದೇ ಕಾರಣಕ್ಕೂ ಹೆಚ್ಚಿನ ಆತಂಕಕ್ಕೆ ಒಳಗಾಗಬಾರದು.ಪರಿಹಾರ ಹಣ ಜಮೆ ಆಗುವ ಪ್ರಕ್ರಿಯೆ ನಿರಂತರ ಪ್ರಕ್ರಿಯೆಯಾಗಿದ್ದು ಹಂತಹಂತವಾಗಿ ಮಳೆ ಹಾನಿ ಗೊಳಗಾದ ಎಲ್ಲಾ ರೈತ ಸಂತ್ರಸ್ತರಿಗೂ ಸಹ ಪರಿಹಾರ ಹಣ ಶೀಘ್ರದಲ್ಲಿಯೇ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
BIGG NEWS: ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ; ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ; ಶ್ರೀರಾಮುಲು
BREAKING NEWS: ಕಲಬುರ್ಗಿಯಲ್ಲಿ ಬೆಳ್ಳಂಬೆಳಗ್ಗೆ ಯುವಕನ ಬರ್ಬರ ಹತ್ಯೆ