ಬೆಂಗಳೂರು : ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶಿಕ್ಷಕರ ನೇಮಕಾತಿಗೆ ಕನಿಷ್ಠ ಅಂಕ ಇಳಿಕೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಮಾಧುಸ್ವಾಮಿ, ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು ವಿಶೇಷ ನಿಯಮಗಳು 2022ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಪಿಎಸ್ ಸಿಯಿಂದ ನಡೆಯುವ ನೇಮಕಾತಿಗೆ ಕನಿಷ್ಟ ಅಂಕ ನಿಗದಿಪಡಿಸಲಾಗುತ್ತಿತ್ತು. ಸಹಜವಾಗಿಯೇ ಈ ಅಂಕಗಳಿಗಿಂತ ಕಡಿಮೆ ಇದ್ದವರು ಶಿಕ್ಷಕರಾಗಿ ನೇಮಕಗೊಳ್ಳದೆ ಹುದದೆಗಳು ಖಾಲಿ ಉಳಿಯುತ್ತಿದ್ದವು. ಈಗ ಕಟ್ ಅಫ್ ಮಾರ್ಕ್ ನ್ನು 60 ರಿಂದ 50 ಕ್ಕೆ ಇಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೂ ಈ ಅಂಕಗಳಿಗೂ ಖಾಲಿ ಹುದ್ದೆ ಭರ್ತಿಯಾಗದೇ ಇದ್ದರೆ ಮತ್ತೊಂದು ಕಟ್ ಆಫ್ ಅಂಕ ನಿಗದಿ ಮಾಡುವಂತೆ ಕೆಪಿಎಸ್ ಸಿಗೆ ಸೂಚನೆ ಕೊಟ್ಟಿದ್ದೇವೆ ಎಂದರು.
BIGG NEWS : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಿಗ್ ಶಾಕ್ : ಖಾಸಗಿ ಬಸ್ ಟಿಕೆಟ್ ದರ ಭಾರೀ ಏರಿಕೆ!