ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಇಂದು ಭರ್ಜರಿ ಸಿಹಿಸುದ್ದಿ ನೀಡುವ ಸಾಧ್ಯತೆ ಇದ್ದು, ಏಳನೇ ವೇತನ ಆಯೋಗ ರಚಿಸಬೇಕೆಂಬ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಇಂದು ಆಯೋಗ ರಚಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ.
BIGG NEWS : ಇಂದಿನಿಂದ ಬಿಜೆಪಿ ‘ಜನಸಂಕಲ್ಪ ಯಾತ್ರೆ’ ಆರಂಭ : ಈ ಜಿಲ್ಲೆಗಳಲ್ಲಿ ಮೂರು ದಿನ ಮೊಳಗಿಲಿದೆ ‘ಕೇಸರಿ ಕಹಳೆ’
ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚಿಸುವುದಾಗಿ ಪ್ರಕಟಿಸಿದ್ದರು. ಈಗ ಆಯೋಗ ರಚಿಸುವ ಸಂಬಂಧ ಭಾನುವಾರ ಸಭೆ ನಡೆಸಿ ಅಂತಿಮಗೊಳಿಸಿದ್ದು, ಇಂದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
7 ನೇ ವೇತನ ಆಯೋಗ ಘೋಷಣೆಯಿಂದ 13.5 ಲಕ್ಷ ನೌಕರರಿಗೆ ಅನುಕೂಲವಾಗಲಿದೆ. 6 ಲಕ್ಷ ಸರ್ಕಾರಿ ನೌಕರರು, ನಿಗಮ ಮಂಡಳಿ ಪ್ರಾಧಿಕಾರಿಗಳ 3 ಲಕ್ಷ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತರಿಗೆ 7 ನೇ ವೇತನ ಆಯೋಗ ಅನ್ವಯವಾಗಲಿದ್ದು, ಸರ್ಕಾರವು ಹೆಚ್ಚುವರಿಯಾಗಿ 12,500 ಕೋಟಿ ರೂ. ವೆಚ್ಚ ಮಾಡಲಿದೆ ಎನ್ನಲಾಗಿದೆ.