ಬೆಂಗಳೂರು : 2022-23 ನೇ ಸಾಲಿನ ಒಂದರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಉಚಿತ ಶೂ ಸಾಕ್ಸ್ ವಿತರಿಸಲು ರಾಜ್ಯ ಸರ್ಕಾರ ಒಟ್ಟು 132 ಕೋಟಿ ರೂ. ಬಿಡುಗಡೆ ಮಾಡಿದೆ.
Shocking news: ಆಸ್ತಿ ಮಾಲೀಕತ್ವದ ಹಕ್ಕು ಪಡೆಯಲು ಹೆತ್ತ ತಾಯಿಗೇ ವಿಷ ಹಾಕಿ ಕೊಂದ ಮಹಿಳೆ
ವಿದ್ಯಾವಿಕಾಸ ಯೋಜನೆಯಡಿ 2022-23 ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ವಿತರಿಸಲು ಅನುಮತಿ ನೀಡಲಾಗಿದ್ದು, ಒಟ್ಟು 132 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಶೂ ಮತ್ತು ಸಾಕ್ಸ್ ಗಳನ್ನು ವಿತರಣೆ ಮಾಡಲು ಸರ್ಕಾರದ ಆದೇಶಗಳನ್ನು ಅನುಸರಿಸಿ 2022-23 ನೇ ಸಾಲಿನಲ್ಲಿ ತಾಲೂಕುವಾರು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಕೆ-2 ಮುಖಾಂತರ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಖಾತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.