ಬೆಂಗಳೂರು : ಶಾಲಾ ಮಕ್ಕಳ ಹೊರೆಯನ್ನ ಕೊಂಚ ಮಟ್ಟಿಗೆ ತಗ್ಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಶನಿವಾರ ಬ್ಯಾಗ್ ಲೆಸ್ ಡೇಯನ್ನಾಗಿ ಮಾಡಲು ಚಿಂತಿಸುತ್ತಿದೆ.
ಶಾಲೆಗೆ ಹೋಗುವ ಮಕ್ಕಳ ಬ್ಯಾಗ್ ದಿನೇ ದಿನೇ ಭಾರವಾಗ್ತಿದ್ದು, ಇದ್ರಿಂದ ಮಕ್ಕಳಲ್ಲಿ ಪಾಶ್ಚರಲ್ ಡಿವಿಯೇಷನ್ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ. ಹಾಗಾಗಿ ಶನಿವಾರ ಬ್ಯಾಗ್ ಲೆಸ್ ಡೇಯನ್ನಾಗಿ ಮಾಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ.
ಅಂದ್ಹಾಗೆ, ವಿದ್ಯಾರ್ಥಿಗಳ ಬ್ಯಾಗ್ ಹೊರೆಯನ್ನ ಇಳಿಸುವ ಉದ್ದೇಶದಿಂದ್ಲೇ ಸೆಮಿಸ್ಟರ್ ಪದ್ದತಿಯನ್ನ ಜಾರಿಗೆ ತರಲಾಗಿದೆ. ಆದ್ರೂ ವಿದ್ಯಾರ್ಥಿಗಳ ಬ್ಯಾಗ್ ಭಾರವೇನು ಕಮ್ಮಿಯಾಗ್ತಿಲ್ಲ. ಹಾಗಾಗಿ ನೋ ಬ್ಯಾಗ್ ಡೇ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.