ಧಾರವಾಡ : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನವೆಂಬರ್ 01 ರಿಂದ ನೋಂದಣಿ ಪ್ರಾರಂಭವಾಗಿದ್ದು, ನೂತನ ಮಾರ್ಗಸೂಚಿಯನ್ವಯ ಮಾಸಿಕ ರೂ.30,000/- ವರೆಗಿನ ಅಥವಾ ವಾರ್ಷಿಕ ರೂ.3,60,000/- ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಅಲ್ಲದೇ ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂ.20/- ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್ಸೈಟ್ https://sahakarasindhu.karnataka.gov.in ಕಚೇರಿ ದೂರವಾಣಿ ಸಂಖ್ಯೆ: 0836-2958634 ಸಂಪರ್ಕಿಸಬಹುದೆಂದು ಧಾರವಾಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ರಂಜನಾ ಟಿ. ಪೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BREAKING NEWS : ಶಾಲಾ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ : ನಾಲ್ವರು ವಿದ್ಯಾರ್ಥಿಗಳು ಸೇರಿ 7 ಜನರಿಗೆ ಗಂಭೀರ ಗಾಯ