ಬೆಂಗಳೂರು : ರಾಜ್ಯ ಸರ್ಕಾರವು ಕುರಿಗಾಹಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ರಾಜ್ಯ ಸರ್ಕಾರವು 354 ಕೋಟಿ ರೂ.ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದೆ.
ರಾಜ್ಯದ ಕುರಿ ಮತ್ತು ಎಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ 20 ಸಾವಿರ ಕುರಿಗಾಹಿಗಳಿಗೆ ತಲಾ 1.75 ಲಕ್ಷ ಘಟಕ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಾಂಪ್ರದಾಯಿಕವಾಗಿ ಬಹಳ ಹಿಂದಿನಿಂದಲೂ ವಲಸೆ ಮುಖಾಂತರ ಸಾಕಾಣಿಕೆ ಮಾಡುತ್ತಿರುವ ಅತ್ಯಂತ ದುರ್ಬಲವಾಗಿರುವ ಕುರಿಗಾಹಿ ಕುಟುಂಬಗಳಿಗೆ ಆರ್ಥಿಕವಾಗಿ ದುರ್ಬಲವಾಗಿರುವ ಕುರಿಗಾಹಿ ಕುಟುಂಬಗಳಿಗೆ ಆರ್ಥಿಕವಾಗಿ ಉತ್ತೇಜನ ನೀಡಲು ಈ ಯೋಜನೆ ಜಾರಿ ಮಾಡಲಾಗಿದೆ.
ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ 1.75 ಲಕ್ಷ ರೂ. ಪೈಕಿ ಶೇ. 50 ರಷ್ಟನ್ನು ರಾಷ್ಟ್ರೀಯ ಸಹಕಾರ ಅಭಿವೃದ್ದಿ ನಿಗಮದಿಂದ ಸಾಲ ಶೇ. 25 ರಷ್ಟು ರಾಜ್ಯ ಸರ್ಕಾರದಿಂದ ಸಹಾಯಧನ, ಶೇ. 25 ರಷ್ಟು ಫಲಾನುಭವಿ ವಂತಿಕೆ ಮೂಲಕ ಅನುಷ್ಠಾನ ಮಾಡಲಾಗುತ್ತದೆ.