ಬೆಂಗಳೂರು : ಅನಧಿಕೃತ ಜಲ್ಲಿ ಕ್ರಷರ್ ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅಕ್ರಮ ಜಲ್ಲಿ ಕ್ರಷರ್ ಗಳನ್ನು ಸಕ್ರಮಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ರಾಜ್ಯ ಸರ್ಕಾರವು ಅನಧಿಕೃತ ಜಲ್ಲಿ ಕ್ರಷರ್ ಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.
BIGG NEWS: ಮುರುಘಾ ಮಠದ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಕೊಡಿ; ಹೊಸ ಬಾಂಬ್ ಸಿಡಿಸಿದ ಬಿ.ಕಾಂತರಾಜ್
ರಾಜ್ಯದಲ್ಲಿ ವಾರ್ಷಿಕ 45 ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದ್ದು, ಈ ಪೈಕಿ 35 ದಶಲಕ್ಷ ಟನ್ ಮರಳನ್ನು ಎಂ. ಸ್ಯಾಂಡ್ ಪೂರೈಸುತ್ತಿದೆ. ಆದರೆ ಕ್ರಷರ್ ಗಳ ಕಾರ್ಯನಿರ್ವಹಣೆಗೆ ಸದ್ಯ ಕಠಿಣ ನಿರ್ಬಂಧಗಳು ಇರುವ ಕಾರಣ ಎಂ.ಸ್ಯಾಂಡ್ ಪೂರೈಕೆಗೆ ಅಡಚಣೆಯಾಗಿದೆ. ಹೀಗಾಗಿ ಸರಳೀಕರಣ ಕುರಿಂತೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.