ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯೊಳಗೆ 2022-23ನೇ ಸಾಲಿಗೆ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4 ರ ಸಿಬ್ಬಂದಿಗಳ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಿ ಆನ್ಲೈನ್ ಮೂಲಕ ನೌಕರರಿಂದ ಅರ್ಜಿ ಆಹ್ವಾನಿಸಿದೆ.
Big news: ನೇಪಾಳದ ಸಂಸತ್ತಿನಲ್ಲಿ ʻಮೊದಲ ಪೌರತ್ವ ತಿದ್ದುಪಡಿ ಮಸೂದೆʼ ಅಂಗೀಕಾರ!
ವರ್ಗಾವಣೆಗಾಗಿ www.kkrtc.org ವೆಬ್ಸೈಟ್ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪಾ ತಿಳಿಸಿದ್ದಾರೆ.
ಸಂಸ್ಥೆಯ ವಿಭಾಗದ ಒಳಗೆ ಹಾಗೂ ಅಂತರ ವಿಭಾಗ ವರ್ಗಾವಣೆ ಚಟುವಟಿಕೆಗಳ ವಿವರ ಹೀಗಿದೆ. ಇದೇ ಜುಲೈ 12 ರಿಂದ 27 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ನಂತರ ಜುಲೈ 28 ರಿಂದ ಆಗಸ್ಟ್ 6ರ ವರೆಗೆ ಸಂಬಂಧಿಸಿದ ವಿಭಾಗ ಮಟ್ಟದ ಸಿಬ್ಬಂದಿ ಶಾಖೆಯಿಂದ ಅರ್ಜಿಗಳನ್ನು ಪರಿಶೀಲಿಸಿ, ವ್ಯತ್ಯಾಸಗಳಿದ್ದಲ್ಲಿ ಸರಿಪಡಿಸಿ ಅವಶ್ಯ ಸೇವಾ ವಿವರಗಳನ್ನು ಭರ್ತಿ ಮಾಡಬೇಕು.
ಆಗಸ್ಟ್ 8 ರಿಂದ 10 ರವರೆಗೆ ಗಣಕ ಇಲಾಖೆಯಿಂದ ವರ್ಗಾವಣೆಗೆ ಅರ್ಹರಿರುವ ಸಿಬ್ಬಂದಿಗಳ ಯೂನಿಟ್ವಾರು ಅರ್ಹತಾ ಪಟ್ಟಿಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಬೇಕು. ಆಗಸ್ಟ್ 11 ರಿಂದ 13 ರವರೆಗೆ ವೆಬ್ಸೈಟ್ನಲ್ಲಿ ಪ್ರಕಟಿಸಿದ ಅರ್ಹತಾ ಪಟ್ಟಿಗೆ ಅಕ್ಷೇಪಣೆ ಇದ್ದಲ್ಲಿ ಅರ್ಜಿದಾರರು ಆಯಾ ಯೂನಿಟ್ ಮುಖ್ಯಸ್ಥರಿಗೆ ಸಲ್ಲಿಸಬೇಕು. ಆಗಸ್ಟ್ 16 ರಿಂದ 20 ರವರೆಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತರ ವಿಭಾಗ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ಆಯಾ ಇಲಾಖಾ ಮುಖ್ಯಸ್ಥರಿಗೆ ಹಾಗೂ ವಿಭಾಗದೊಳಗಿನ ವರ್ಗಾವಣಾ ಅರ್ಜಿಗಳೊಂದಿಗೆ ದೃಢೀಕೃತ ಪಟ್ಟಿಯನ್ನು ವಿಭಾಗದ ವರ್ಗಾವಣಾ ಸಮಿತಿಗೆ ಸಿಬ್ಬಂದಿ ಶಾಖೆಯಿಂದ ಸಲ್ಲಿಸಬೇಕು.
ಆಗಸ್ಟ್ 21 ರಿಂದ 30 ರವರೆಗೆ ಆಯಾ ವರ್ಗಾವಣಾ ಸಮಿತಿಗಳು ವರ್ಗಾವಣಾ ಆದೇಶಗಳನ್ನು ಹೊರಡಿಸಿ, ಕಡ್ಡಾಯವಾಗಿ ಅನುಸರಣಾ ವರದಿಯನ್ನು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಕೇಂದ್ರ ಕಚೇರಿ, ಕಲಬುರಗಿ ಇವರಿಗೆ ಸಲ್ಲಿಸಬೇಕು. ಸೆಪ್ಟೆಂಬರ್ 1 ರಿಂದ 15ರ ವರೆಗೆ ವರ್ಗಾವಣೆಗೊಂಡ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬೇಕೆಂದು ವೇಳಾಪಟ್ಟಿಯಲ್ಲಿ ತಿಳಿಸಿದೆ.