ಕೊಪ್ಪಳ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದಿಂದ ದೇವದಾಸಿ ಪುನರ್ವಸತಿ ಯೋಜನೆಯಡಿ ನಿವೇಶನ ಹೊಂದಿರುವ ಮಾಜಿ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
BIGG NEWS : ದಸರಾ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆ ಶಾಕ್ : ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ!
2021-22ನೇ ಸಾಲಿನ ಪರಿಶಿಷ್ಠ ಜಾತಿ ಉಪಯೋಜನೆಯಡಿ ಬಳಕೆ ಯಾಗದ ಅನುದಾನದಲ್ಲಿ ವಸತಿ ರಹಿತ ಮಾಜಿ ದೇವದಾಸಿ ಮಹಿಳೆರಿಗೆ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ 171 ಫಲಾನುಭವಿಗಳಿಗೆ ಘಟಕದ ವೆಚ್ಛ ಪ್ರತಿ ಫಲಾನುಭವಿಗಳಿಗೆ ರೂ. 1,75,000 ಸಹಾಯಧನ ಮತ್ತು ನಗರ ಪ್ರದೇಶದ 25 ಫಲಾನುಭವಿಗಳಿ ಘಟಕ ವೆಚ್ಛ ರೂ. 2 ಲಕ್ಷಗಳಂತೆ ಸಹಾಯಧನವನ್ನು ನೀಡಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.
SHOCKING NEWS: ಗಾಂಜಾ ಸೇವಿಸಿದ ಅಮಲಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆ, ಇಬ್ಬರು ಅರೆಸ್ಟ್
ಅರ್ಜಿಯೊಂದಿಗೆ ಆರ್.ಡಿ ನಂಬರ್ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ ಪಡಿತರ ಹೊಸ ಚೀಟಿ, 4 ಭಾವಚಿತ್ರ, ನಿವೇಶನದ ಖಾತಾ ಉತ್ತಾರ, ಆಧಾರ ಕಾರ್ಡ್ ಪ್ರತಿ, ಚಾಲ್ತಿ ಬ್ಯಾಂಕ್ ಪಾಸ್ ಬುಕ್, ದೂರವಾಣಿ ಸಂಖ್ಯೆ, ಸರ್ಕಾರಿ ವೈದ್ಯರಿಂದ ಪಡೆದ ವಯಸ್ಸಿನ ಪ್ರಮಾಣ ಪತ್ರ ಮತ್ತು ಈ ಮುಂಚೆ ಯಾವುದೇ ಯೋಜನೆಯಡಿ ವಸತಿ ಸೌಲಭ್ಯ ಪಡೆದಿಲ್ಲವೆಂಬ ದೃಡಿಕರಣ ಪತ್ರವನ್ನು ಗ್ರಾಮ ಪಂಚಾಯತಿಯಿಂದ ಪಡೆದು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿಗಳನ್ನು ಉಚಿತವಾಗಿ ಆಯಾ ತಾಲ್ಲೂಕಿನ ಯೋಜನಾ ಅನುಷ್ಠಾನಾಧಿಕಾರಿಗಳಾದ ಕೊಪ್ಪಳದ ದಾದೇಸಾಬ್ ಹಿರೇಮನಿ ದೂ.ಸಂ: 9538628359, ಗಂಗಾವತಿಯ ಭೀಮಣ್ಣ ಟಿ.ಜಿ. ದೂ.ಸಂ: 9880518498, ಕುಷ್ಟಗಿಯ ಎಂ.ಮರಿಯಪ್ಪ ದೂ.ಸಂ: 9686148933, ಯಲಬುರ್ಗಾದ ರೇಣುಕಾ ಎಮ್. ದೂ.ಸಂ: 9686072296 ಇವರನ್ನು ಸಂಪರ್ಕಿಸಿ, ಇವರಿಂದ ಅರ್ಜಿ ಪಡೆದು ಭರ್ತಿ ಮಾಡಿ, ಅಕ್ಟೋಬರ್ 17 ರೊಳಗಾಗಿ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳು ಮತ್ತು ಅಪೂರ್ಣ ಮಾಹಿತಿ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.