ಮೈಸೂರು : ಮಳೆಯಿಂದ ಬೆಳೆ ನಷ್ಟವಾದ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ರಾಜ್ಯದಲ್ಲಿ ನೆರೆಯಿಂದ ಬೆಳೆ ನಷ್ಟವಾದ ರೈತರಿಗೆ ಮತ್ತೊಮ್ಮೆ ಬೀಜ, ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
BIGG NEWS : ಜುಲೈ 24 ರಿಂದ ಸಿಎಂ ಬೊಮ್ಮಾಯಿ 3 ದಿನ ದೆಹಲಿ ಪ್ರವಾಸ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ!
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆಯಿಂದಾಗಿ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈಸೇರಿಲ್ಲ. ಅದು ಬಂದೊಡಣನೆ ಮತ್ತೊಮ್ಮೆ ರೈತರಿಗೆ ಬೀಜ, ರಸಗೊಬ್ಬರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವಾಹ ತಗ್ಗುವವರೆಗೂ ಬೆಳೆ ನಷ್ಟದ ಅಂದಾಜು ಕಷ್ಟ, ಈಗ ಕೇವಲ ರಸ್ತೆ, ಸೇತುವೆ ನಾಶವಾಗಿರುವ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ. ಬಳಿಕ ಬೆಳೆ ನಷ್ಟದ ವರದಿ ಬರಲಿದ್ದು, ಆಗ ಮತ್ತೊಮ್ಮೆ ಬೀಜ, ರಸಗೊಬ್ಬರ ವಿತರಿಸಲಾಗುವುದು ಎಂದು ಹೇಳಿದ್ದಾರೆ.