ಬೆಂಗಳೂರು : ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುವ ರೈತರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುವ ರೈತರಿಗೆ ಸಾಗುವಳಿ ಚೀಟಿ ನೀಡುವ ಸಂಬಂಧ ಸಕಾರಾತ್ಮಕವಾಗಿ ಶೀಘ್ರವೇ ಕಾನೂನು ರೂಪಿಸುವಂತೆ ಸಚಿವ ಸಂಪುಟ ಉಪಸಮಿತಿ ಕಾನೂನು ಇಲಾಖೆಗೆ ಸೂಚಿಸಿದೆ.
BIGG NEWS : ರಾಜ್ಯದಲ್ಲಿ ಮತ್ತೆ ಕೈಕೊಟ್ಟ `108 ಆ್ಯಂಬುಲೆನ್ಸ್’ ಸೇವೆ : ಕರೆ ಮಾಡಿದ್ರೆ ಸ್ವೀಕರಿಸದ ಸಿಬ್ಬಂದಿ!
ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್. ಅಶೋಕ್, ಹಲವು ದಶಕಗಳಿಂದ ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ತೆಂಗು, ಅಡಕೆ ಸೇರಿದಂತೆ ವಿವಿಧ ರೀತಿಯ ಬೆಳೆಗಳ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಎಕರೆ ಭೂಮಿಯಲ್ಲಿ ಈ ರೀತಿ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದೆ. ಇಂತರ ರೈತರಿಗೆ ಸಾಗುವಳಿ ಚೀಟಿ ನೀಡಲು ಕಾನೂನು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.
ಇನ್ನು ಬಗರ್ ಹುಕುಂ ಅರ್ಜಿ ಸಲ್ಲಿಸಿದವರಿಗೆ ಹಾಗೂ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡವರಿಗೆ ಮಾತ್ರ ಸಾಗುವಳಿ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ. ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
BIG NEWS : ʻಭಾರತವು ವಿಜ್ಞಾನ ಮತ್ತು ಸಂಶೋಧನೆಯ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸುತ್ತಿದೆʼ: ಪ್ರಧಾನಿ ಮೋದಿ