ನವದೆಹಲಿ : ಜಾಗತಿಕವಾಗಿ ಖಾದ್ಯ ತೈಲ ಬೆಲೆ ಕುಸಿತದ ಲಾಭವನ್ನ ಗ್ರಾಹಕರಿಗೆ ವರ್ಗಾಯಿಸುವ ಸಲುವಾಗಿ, ಪತಂಜಲಿ ಫುಡ್ಸ್ ಲಿಮಿಟೆಡ್ ಶೀಘ್ರದಲ್ಲೇ ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆಯ ಬೆಲೆಯನ್ನು ಪ್ರತಿ ಲೀಟರ್ಗೆ 10-15 ರೂ.ಗಳಷ್ಟು ಕಡಿತಗೊಳಿಸಲಿದೆ.
ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, ಈ ತಿಂಗಳ ಆರಂಭದಲ್ಲಿ, ಆಹಾರ ಸಚಿವಾಲಯವು ಖಾದ್ಯ ತೈಲ ಕಂಪನಿಗಳಿಗೆ ಜಾಗತಿಕ ಬೆಲೆಗಳ ಕುಸಿತಕ್ಕೆ ಅನುಗುಣವಾಗಿ ಖಾದ್ಯ ತೈಲಗಳ ಬೆಲೆಗಳನ್ನ ಕಡಿಮೆ ಮಾಡಲು ನಿರ್ದೇಶಿಸಿತ್ತು.
ಕೇಂದ್ರದ ನಿರ್ದೇಶನವನ್ನ ಅನುಸರಿಸಿ, ಮದರ್ ಡೈರಿ ಪ್ರತಿ ಲೀಟರ್ಗೆ 14 ರೂ ಮತ್ತು ಅದಾನಿ ವಿಲ್ಮಾರ್ ಪ್ರತಿ ಲೀಟರ್ಗೆ 30 ರೂಪಾಯಿ ಇಳಿಕೆ ಮಾಡಿವೆ.
ಪತಂಜಲಿ ಫುಡ್ಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸಂಜೀವ್ ಅಸ್ತಾನಾ, ಪಿಟಿಐಗೆ ಪ್ರತಿಕ್ರಿಯಿಸಿ, “ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಬೆಲೆಯನ್ನ ಒಂದು ಅಥವಾ ಎರಡು ದಿನಗಳಲ್ಲಿ ಪ್ರತಿ ಲೀಟರ್ಗೆ 10-15 ರೂ.ಗಳಷ್ಟು ಕಡಿಮೆ ಮಾಡಲಿದ್ದೇವೆ. ಕಳೆದ 45 ದಿನಗಳನ್ನ ಗಮನಿಸಿದರೆ, ಒಟ್ಟು ಕಡಿತವು ಪ್ರತಿ ಲೀಟರ್ಗೆ 30-35 ರೂ.ಗಳಾಗಿರುತ್ತದೆ” ಎಂದು ಹೇಳಿದರು. ಪತಂಜಲಿ ಫುಡ್ಸ್ನ ಪ್ರತಿಸ್ಪರ್ಧಿ ಕಂಪನಿಗಳು ಕಳೆದ ಒಂದೂವರೆ ತಿಂಗಳಲ್ಲಿ ಅನುಪಾತವನ್ನ ಕಡಿತಗೊಳಿಸಿಲ್ಲ ಎಂದರು.