ಮಡಿಕೇರಿ : 2021-22 ಸಾಲಿನಲ್ಲಿ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಬಳಕೆಯಾಗದ ಅನುದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವ ಉದ್ಯೋಗ ಹಮ್ಮಿಕೊಳ್ಳಲು ಉದ್ಯೋಗಿನಿ ಯೋಜನೆಯಡಿ ವಿವಿಧ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ.
ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳ (ಹಂದಿ, ಆಡು, ಕೋಳಿ ಸಾಕಾಣಿಕೆ, ನರ್ಸರಿ, ಬ್ಯೂಟಿಪಾರ್ಲರ್, ಟೈಲರಿಂಗ್, ವ್ಯಾಪಾರ, ಇತ್ಯಾದಿಗಳಿಗೆ) ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಲು 18 ರಿಂದ 55 ವರ್ಷ ವಯೋಮಿತಿಗೊಳಪಟ್ಟು ಬಡತನ ರೇಖೆಯ ಒಳಪಡುವ ಪಡಿತರ ಚೀಟಿ ಹೊಂದಿದ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಮಾತ್ರ ಅವಕಾಶವಿದೆ.
BIGG NEWS : ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಯ ಅವಾಂತರ : ಉದ್ಘಾಟನೆ ಮುನ್ನವೇ ʻ ಕುಂಬಳಗೋಡು ಟೋಲ್ ಮುಳುಗಡೆ ʼ
18 ರಿಂದ 55 ವರ್ಷದೊಳಗಿನ ಮಹಿಳೆಯರಿಗೆ ಆಧ್ಯತೆ ನೀಡಲಾಗುವುದು. ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಘಟಕ ವೆಚ್ಚ ರೂ.1 ಲಕ್ಷ ದಿಂದ ರೂ. 3 ಲಕ್ಷ ಹಾಗೂ ಶೇ.50 ಸಹಾಯಧನ ನೀಡಲಾಗುವುದು. ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷ ಮೀರಬಾರದು. ಜಾತಿ ಪ್ರಮಾಣ ಪತ್ರ, ಆದಾಯ ದೃಢೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಬಿಪಿಎಲ್ ಕಾರ್ಡ್, ಪಾಸ್ ಪೆÇೀರ್ಟ್ ಸೈಜ್ ಭಾವಚಿತ್ರ ಸಲ್ಲಿಸಬೇಕು.
ದೇವರೇ… ಮತ್ತೊಮ್ಮೆʼ ಮುಖ್ಯಮಂತ್ರಿ ಸಿದ್ದರಾಮಯ್ಯʼ ಆಗಲಿ : ಗಮನ ಸೆಳೆದ ʻ ಕಾಂಗ್ರೆಸ್ ನಾಯಕನ ಬಾಳೆಹಣ್ಣಿನ ಹರಕೆ ʼ
ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಇಲ್ಲಿ ಈ ಯೋಜನೆಯ ಅರ್ಜಿಗಳು ಲಭ್ಯವಿದ್ದು ಅರ್ಹ ಮಹಿಳೆಯರು ಸದರಿ ಕಚೇರಿಗಳಿಂದ ಸೆಪ್ಟೆಂಬರ್ 02 ರ ಒಳಗೆ ಅರ್ಜಿ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ದ್ವಿ ಪ್ರತಿಯಲ್ಲಿ ಸೆಪ್ಟೆಂಬರ್ 07 ರ ಒಳಗೆ ಸಲ್ಲಿಸಬೇಕು.
ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು (ಪ.ಪಂ)ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಆಸಕ್ತಿ ಇರುವ ಮಹಿಳೆಯರು ಜಿಲ್ಲಾ ವ್ಯವಸ್ಥಾಪಕರ ಕಚೇರಿ/ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ ಗೇಟ್, ಮೈಸೂರು ರಸ್ತೆ, ಮಡಿಕೇರಿ ದೂ.ಸಂ.08272-298379, 9980632352 ಸಂಖ್ಯೆಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.