ಹುಬ್ಬಳ್ಳಿ : ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಶ್ರೀರಾಮಸೇನೆ ಸಂಸ್ಥಾನಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ.
BREAKING NEWS : ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಸಹೋದರನ ಪುತ್ರ ಅಪಘಾತದಲ್ಲಿ ಸಾವು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮಾಂಸ ಸೇವನೆ ವಿಚಾರದಲ್ಲಿ ವಿನಾಕಾರಣ ಅವರ ವಿರುದ್ಧ ಆರೋಪ ಮಾಡುವ ಬಿಜೆಪಿಯ ಕೆಲವರ ವರ್ತನೆ ನೋಡಿದರೆ ಅಸಹ್ಯವಾಗುತ್ತದೆ. ಮಾಂಸ ಸೇವನೆಯು ಒಂದು ಚರ್ಚೆಯ ವಿಷಯವೇ ಅಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯ ಅವರನ್ನು ಎಳೆದು ತರುತ್ತಿದ್ದಾರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಸರಿಯಾಗಿ ತಿಳಿದುಕೊಂಡ ನಂತರ ಅವರು ಮಾತನಾಡಬೇಕು. ಮತಾಂಧ ಟಿಪ್ಪು ಸುಲ್ತಾನನ್ನು ಇವರು ಹೀರೊ ಮಾಡಲು ಹೊರಟಿದ್ದಾರೆ. ನಾವು ಮನೆಮನೆಗೆ ತೆರಳಿ ಸಾವರ್ಕರ್ ಬಗ್ಗೆ ತಿಳವಳಿಕೆ ನೀಡುತ್ತೇವೆ. ಪ್ರತಿ ಗಣೇಶ ಪೆಂಡಾಲ್ನಲ್ಲೂ ಸಾವರ್ಕರ್ ಫೋಟೊ ಇಡುತ್ತೇವೆ ಎಂದರು.
BIGG NEWS: ವಿವಾದ ಸೃಷ್ಟಿಸುವುದೇ ಪ್ರತಾಪ್ ಸಿಂಹ ಕೆಲಸ-ಯತೀಂದ್ರ ಸಿದ್ದರಾಮಯ್ಯ ಕಿಡಿ