ಮಂಗಳೂರು : ಕಳೆದ 11 ವರ್ಷಗಳಿಂದ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶ್ವಾನ ಗೀತಾ ಸಾವನ್ನಪ್ಪಿದೆ.
ಮಿಜೋರಾಂನ ಸಾಂಪ್ರದಾಯಿಕ ಬುಡಕಟ್ಟು ನೃತ್ಯದಲ್ಲಿ ಗುಜರಾತ್ ವಿದ್ಯಾರ್ಥಿಗಳು ತೊಡಗಿದ ವೀಡಿಯೊ ವೈರಲ್ | WATCH
ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ಹೆಣ್ಣು ಶ್ವಾನ ಮೇ 21, 2011 ರಂದು ಜನಿಸಿತ್ತು. ಆಗಸ್ಟ್ 19, 2011 ರಂದು ಪೊಲೀಸ್ ಪಡೆಗೆ ಸೇರ್ಪಡೆಯಾಗಿತ್ತು. ಕರ್ತವ್ಯಕ್ಕೆ ಸೇರಿ 11 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿತ್ತು.
ಗೀತಾ ಬೆಂಗಳೂರಿನ ಸಿಎಆರ್ ಸೌತ್ ನಲ್ಲಿ 11 ತಿಂಗಳ ಕಾಲ ತರಬೇತಿ ಪಡೆದಿತ್ತು. ಹರೀಶ್ ಎಂಬ ಪೊಲೀಸ್ ಸಿಬ್ಬಂದಿ ಶ್ವಾನದ ಹ್ಯಾಂಡ್ಲರ್ ಆಗಿದ್ದರು. ಮಂಗಳೂರಿಗೆ ವಿವಿಐಪಿ ಭೇಟಿ ನೀಡಿದಾಗ ಬಂದೋಬಸ್ತ್ ತಂಡದ ಭಾಗವಾಗಿದ್ದ ಗೀತಾ ಇಲಾಖೆಯಲ್ಲಿ 11 ವರ್ಷಗಳ ಸೇವಾವಧಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.