ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (BCCI) ಹೊಸ ಆರಂಭ ಶುರುವಾಗಿದ್ದು, ಬಿಸಿಸಿಐ ಅಧ್ಯಕ್ಷರಾಗಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರಾವಧಿ ಮುಕ್ತಾಯವಾಗಿದೆ. ಮಂಡಳಿಗೆ ಹೊಸ ಅಧ್ಯಕ್ಷರು ಸಿಕ್ಕಿದ್ದು, ವಿಶ್ವಕಪ್ ಚಾಂಪಿಯನ್ ಆಗಿದ್ದ ರೋಜರ್ ಬಿನ್ನಿ ಈಗ ಹೊಸ ಬಾಸ್ ಆಗಿದ್ದಾರೆ. ತಮ್ಮ ಇನ್ನಿಂಗ್ಸ್ ಮುಗಿದ ನಂತರ ಸೌರವ್ ಗಂಗೂಲಿ ಹೊಸ ತಂಡಕ್ಕೆ ಶುಭ ಕೋರಿದ್ದಾರೆ.
ಸೌರವ್ ಗಂಗೂಲಿ, “ನಾನು ರೋಜರ್ ಬಿನ್ನಿ ಅವರನ್ನ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಆಯ್ಕೆಯಾದ ಹೊಸ ಗುಂಪು ವಿಷಯಗಳನ್ನ ಮುಂದುವರಿಸಲು ಕೆಲಸ ಮಾಡುತ್ತದೆ. ಬಿಸಿಸಿಐ ಉತ್ತಮ ಕೈಯಲ್ಲಿದೆ. ಭಾರತೀಯ ಕ್ರಿಕೆಟ್ ಬಲವಾಗಿ ಪ್ರಗತಿಯಲ್ಲಿದ್ದು, ನಾವು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ” ಎಂದರು.
ಸುಮಾರು 3 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವ್ರ ಬಿಸಿಸಿಐ ಜೊತೆಗಿನ ಪ್ರಯಾಣ ಇಲ್ಲಿಗೆ ಕೊನೆಗೊಂಡಿದೆ. ಈ ಹಿಂದೆ ಅವರಿಗೆ ಮತ್ತೊಂದು ಅವಕಾಶ ಸಿಗಬಹುದು ಎಂಬ ಊಹಾಪೋಹಗಳಿದ್ದವು. ಆದ್ರೆ, ಅದು ಆಗಲಿಲ್ಲ. ಸೌರವ್ ಗಂಗೂಲಿ ಮತ್ತೊಮ್ಮೆ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ಗೆ ಸೇರುತ್ತಾರೆ ಮತ್ತು CAB ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ನಂಬಲಾಗಿದೆ.
ಬಿಸಿಸಿಐಗೆ ಹೊಸ ತಂಡ ಸಿಕ್ಕಿದೆ
ಚುನಾವಣೆಯ ಬಗ್ಗೆ ಮಾತನಾಡಿದರೆ, ಬಹುತೇಕ ಎಲ್ಲಾ ಹುದ್ದೆಗಳಿಗೂ ಅವಿರೋಧವಾಗಿ ನೇಮಕ ಮಾಡಲಾಗಿದೆ. ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾದರೆ, ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜಯ್ ಷಾ ಮತ್ತೊಮ್ಮೆ ಬಿಸಿಸಿಐ ಕಾರ್ಯದರ್ಶಿ ಆಗಿದ್ದರೆ, ದೇವಜಿತ್ ಸೈಕಿಯಾ ಜಂಟಿ ಕಾರ್ಯದರ್ಶಿ, ಆಶಿಶ್ ಶೆಲಾರ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.