ಕಲಬುರಗಿ : ಶ್ರೀರಾಮ ಸೇನೆಯಿಂದ ಜಿಲ್ಲೆಯ ಜೇವರ್ಗಿ ಪಟ್ಟಣದ ಅಖಂಡೇಶ್ವರ ಎ.ಪಿ.ಎಂ.ಸಿ ಯಾರ್ಡ್ ಮತ್ತು ಗಣೇಶ ಚೌಕ್ ನಲ್ಲಿ ಪ್ರತ್ಯೇಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳ ವಿಸರ್ಜನೆ ಇದೇ ಸೆ.21 ರಂದು ನಡೆಯಲಿರುವ ಕಾರಣ ಕಾನೂನು ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಕಾಪಾಡುವ ದೃಷ್ಠಿಯಿಂದ ಸೆ.20ರ ಬೆಳಿಗ್ಗೆ 6 ಗಂಟೆಯಿಂದ ಸೆ.21ರ ಮಧ್ಯರಾತ್ರಿ 12 ಗಂಟೆ ವರೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಸೇರಿದಂತೆ ನಾಲ್ವರ ಸಾರ್ವಜನಿಕ ಭಾಷಣ ನಿರ್ಬಂಧಿಸಿ ಡಿ.ಸಿ. ಯಶವಂತ ವಿ. ಗುರುಕರ್ ಸೋಮವಾರ ಆದೇಶಿಸಿದ್ದಾರೆ.
4.5 ಕೋಟಿ EPFO ಚಂದರಾರರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿಗಲಿದೆ ಈ ಎಲ್ಲಾ ಪ್ರಯೋಜನಗಳು
ಪ್ರಮೋದ ತಂದೆ ಹಣಮಂತರಾವ ಮುತಾಲಿಕ್ ಸೇರಿದಂತೆ ಕುಂದಾಪುರಿನ ಕು. ಚೈತ್ರಾ ತಂದೆ ಬಾಲಕೃಷ್ಣ ನಾಯಕ, ಕು.ಹಾರಿಕಾ ಮಂಜುನಾಥ ಹಾಗೂ ಶ್ರೀ ಕಾಳಿ ಶ್ರೀಸ್ವಾಮಿಗಳು ಸಾರ್ವಜನಿಕವಾಗಿ ಯಾವುದೇ ಭಾಷಣ ಮಾಡದಂತೆ ಸಿ.ಆರ್.ಪಿ.ಸಿ. ಕಾಯ್ದೆ-1973ರ ಸೆಕ್ಷನ್ 133, 143 ಹಾಗೂ 144ರನ್ವಯ ನಿರ್ಬಂಧಿಸಿ ಆದೇಶಿಸಲಾಗಿದೆ.