ನವದೆಹಲಿ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಪಂಜಾಬ್ ಪ್ರಾಂತ್ಯದ ವಜೀರಾಬಾದ್ನಲ್ಲಿ ನಡೆದ ಗುಂಡಿನ ದಾಳಿಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತೀವ್ರ ನಿಗಾ ಇಡಲಿದೆ ಎಂದಿದೆ.
ಘಟನೆಯಲ್ಲಿ ಖಾನ್ ಕಾಲಿಗೆ ಬಂದೂಕಿನಿಂದ ಗುಂಡು ತಗುಲಿ ಗಾಯಗೊಂಡಿದ್ದು, ಅವರ ಸಹಾಯಕ ಮತ್ತು ಪಾಕಿಸ್ತಾನದ ಸೆನೆಟರ್ ಫೈಸಲ್ ಜಾವೇದ್ ಖಾನ್ ಕೂಡ ಈ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, “ಇದು ಈಗಷ್ಟೇ ನಡೆದ ಬೆಳವಣಿಗೆ. ನಾವು ನಿಕಟವಾಗಿ ಗಮನಿಸುತ್ತಿದ್ದೇವೆ ಮತ್ತು ನಡೆಯುತ್ತಿರುವ ಬೆಳವಣಿಗೆಗಳನ್ನ ನಾವು ಮೇಲ್ವಿಚಾರಣೆ ಮಾಡುವುದನ್ನ ಮುಂದುವರಿಸುತ್ತೇವೆ” ಎಂದರು.
ನೆರೆಯ ರಾಷ್ಟ್ರದ ಇತ್ತೀಚಿನ ವರದಿಗಳ ಪ್ರಕಾರ, ಅಪಾಯದಿಂದ ಪಾರಾದ ಖಾನ್ ಅವ್ರನ್ನ ಚಿಕಿತ್ಸೆಗಾಗಿ ಲಾಹೋರ್ಗೆ ಕರೆದೊಯ್ಯಲಾಗುತ್ತಿದೆ.
“ಇಮ್ರಾನ್ ಖಾನ್ ಅವ್ರನ್ನ ಲಾಹೋರ್ನ ಆಸ್ಪತ್ರೆಗೆ ಕರೆದೊಯ್ಯಲಾಗ್ತಿದೆಯಾದ್ರೂ ಅವ್ರು ಗಂಭೀರವಾಗಿ ಗಾಯಗೊಂಡಿಲ್ಲ. ಅವರ ಕಾಲಿಗೆ ಗುಂಡು ತಗುಲಿತು’ ಎಂದು ಪಕ್ಷದ ಅಧಿಕಾರಿ ಅಸಾದ್ ಉಮರ್ ಉಮರ್ ಸುದ್ದಿಗಾರರಿಗೆ ತಿಳಿಸಿದರು.
ಇನ್ನು ಆಂತರಿಕ ಸಚಿವಾಲಯದ ಪ್ರಕಾರ, ಪ್ರಧಾನಿ ಶೆಹಬಾಜ್ ಶರೀಫ್ ಘಟನೆಯ ಬಗ್ಗೆ ತಕ್ಷಣದ ತನಿಖೆಗೆ ಆದೇಶಿಸಿದ್ದಾರೆ.
ಡಿಕೆಶಿ ಸಂತೆಯಲ್ಲಿ ನಿಂತು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಬನ್ನಿ ಎಂದು ಕರೆಯುತ್ತಿದ್ದಾರೆ : ಸಚಿವ ಅಶೋಕ್ ವ್ಯಂಗ್ಯ
‘ಶವ’ ಅಂತ ಕರಿಬೇಡಿ, ‘ಚಂದ್ರು’ ಎಂದು ಕರೆಯಿರಿ : ಬಿಕ್ಕಿ ಬಿಕ್ಕಿ ಅತ್ತ ಶಾಸಕ ರೇಣುಕಾಚಾರ್ಯ |M.P Renukacharya