ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ಕಾಟದಿಂದ ಬೇಸತ್ತಿದ್ದ ವಿಶ್ವ ಕೆಲವು ಸಮಯದಿಂದ ಶಾಂತಿಯುತವಾಗಿದೆ. ಆದ್ರೆ, ಈಗ ಈ ಸಾಂಕ್ರಾಮಿಕ ರೋಗವು ಮತ್ತೊಮ್ಮೆ ಉಲ್ಭಣಿಸುವ ಲಕ್ಷಣ ಕಾಣಿಸ್ತಿದೆ. ಹೌದು, ಅನೇಕ ದೇಶಗಳಲ್ಲಿ ನಿರ್ಬಂಧಗಳನ್ನ ಸಡಿಲಿಸಲಾಗುತ್ತಿದೆಯಾದ್ರೂ, ಚೀನಾದ ಪರಿಸ್ಥಿತಿ ಭಿನ್ನವಾಗಿದೆ. ಚೀನಾ ಕಠಿಣ ಲಾಕ್ಡೌನ್ಗಳನ್ನ ಅನುಸರಿಸುತ್ತಿದೆ ಅಂದ್ರೆ ನೀವೇ ಅಲ್ಲಿನ ಪರಿಸ್ಥಿತಿಯನ್ನ ಅರ್ಥಮಾಡಿಕೊಳ್ಳಬಹುದು. ಲಾಕ್ಡೌನ್ ಹೇರಿದ ಹೊರತಾಗಿಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಆರು ತಿಂಗಳ ನಂತ್ರ ಚೀನಾದಲ್ಲಿ ಹೊಸ ಕೋವಿಡ್ -19 ಸಾವು ವರದಿಯಾಗಿದೆ. ದೇಶದ ಆರೋಗ್ಯ ಸಚಿವಾಲಯವು ಇದನ್ನ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ, ಇಲ್ಲಿಯವರೆಗೆ ಸಾವಿನ ಸಂಖ್ಯೆ 5,227 ಕ್ಕೆ ತಲುಪಿದೆ ಎಂದು ಚೀನಾ ತಿಳಿಸಿದೆ. ಡ್ರ್ಯಾಗನ್ ದೇಶವು ವೈರಸ್ ನಿಯಂತ್ರಿಸಲು ‘ಶೂನ್ಯ ಕೋವಿಡ್ ನೀತಿ’ ಹೆಸರಿನಲ್ಲಿ ಕಠಿಣ ನಿರ್ಬಂಧಗಳನ್ನು ಇನ್ನೂ ಮುಂದುವರಿಸಿದೆ.
ಚೀನಾದಲ್ಲಿ ಸುಮಾರು 92 ಪ್ರತಿಶತದಷ್ಟು ಜನರು ಕೋವಿಡ್ -19 ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಆದಾಗ್ಯೂ, ವಯಸ್ಸಾದವರಿಗೆ ಲಸಿಕೆಗಳನ್ನು ಸರಿಯಾಗಿ ವಿತರಿಸಲಾಗಿಲ್ಲ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಸಾವನ್ನಪ್ಪಿದ ವ್ಯಕ್ತಿಗೂ ಲಸಿಕೆ ನೀಡಲಾಗಿದೆಯೇ? ಅಥವಾ? ಈ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿಲ್ಲ.
BREAKING NEWS : ಮಾಜಿ ಶಾಸಕ ‘ಯು.ಬಿ ಬಣಕಾರ್’ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ
ಜನ ಬಿಜೆಪಿಗರ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಕಾಲ ಸದ್ಯದಲ್ಲೇ ಬರಲಿದೆ: ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
ಜನ ಬಿಜೆಪಿಗರ ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಕಾಲ ಸದ್ಯದಲ್ಲೇ ಬರಲಿದೆ: ಟ್ವಿಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ