ಮಂಡ್ಯ : ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಆರೋಪದ ಹಿನ್ನೆಲೆ ನಾಗಮಂಗಲ ಶಾಸಕ ಸುರೇಶ್​​ಗೌಡ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

BIGG NEWS : ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅಬ್ಬರ : ಸೇತುವೆ ಇಲ್ಲದೇ ʼ ಚೆಂಬು – ದಬ್ಬಡ್ಕʼ ಗ್ರಾಮಕ್ಕೆ ʼಸಂಪರ್ಕ ಕಟ್‌ ʼ

ಶಾಸಕ ಸುರೇಶ್​​ಗೌಡ ವಿರುದ್ಧ ನಾಗಮಂಗಲ ಆರ್​​ಎಫ್​ಓ ಸತೀಶ್ ದೂರು ನೀಡಿದ್ದು, ಶಾಸಕ ಸುರೇಶಗೌಡ ಸೇರಿದಂತೆ 10 ಜನರ ವಿರುದ್ಧ ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.

ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ಜೆಡಿಎಸ್‌ ಶಾಸಕ ಸುರೇಶ್ ಗೌಡ, ನಿಂದಿಸಿ ಬೆದರಿಕೆ ಹಾಕಿರುವ ಘಟನೆ ನಾಗಮಂಗಲ ತಾಲೂಕಿನ ಹಾಲತಿ ಗ್ರಾಮದಲ್ಲಿ ನಡೆದಿದೆ.

ಘಟನೆ ಹಿನ್ನಲೆ: ಸರ್ವೆ ನಂ 135ರಲ್ಲಿ ಅರಣ್ಯ ಇಲಾಖೆ ನೆಡು ತೋಪು ಬೆಳೆಸಿದ್ದು, ಇದೇ ಜಾಗದಲ್ಲಿ ಬಗರ್‌ ಹುಕುಂ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ಜಮೀನು ವಶಪಡಿಸಿಕೊಳ್ಳಲು ಬಂದ ಅಧಿಕಾರಿಗಳ ವಿರುದ್ಧ ರೈತರು ಕಿಡಿಕಾರಿದ್ದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಶಾಸಕ ಸುರೇಶ್ ಗೌಡ ಆಕ್ರೋಶಗೊಂಡ ಅರಣ್ಯ ಸಿಬ್ಬಂದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕರ ಈ ವರ್ತನೆಗೆ ವ್ಯಾಪಾಕ ಟೀಕೆ ಕೇಳಿ ಬರುತ್ತಿದ್ದು, ಓಟ್‌ ಬ್ಯಾಂಕ್‌ ಸಲುವಾಗಿ ಅರಣ್ಯದ ಕತ್ತು ಹಿಸುಕಲು ಶಾಸಕರು ಮುಂದಾಗಿರುವುದನ್ನು ಆಕ್ರೋಶ ವ್ಯಕ್ತವಾಗುತ್ತಿದೆ.

BIGG BREAKING NEWS : ಮಹಾದಾಯಿ ಯೋಜನೆಗೆ ಗೋವಾದಿಂದ ಮತ್ತೆ ಕ್ಯಾತೆ : ಕರ್ನಾಟಕ ಸರ್ಕಾರದ ವಿರುದ್ಧ ತುರ್ತು ತನಿಖೆಗೆ ಆಗ್ರಹ

Share.
Exit mobile version