ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಈ ಬೆನ್ನಲ್ಲೇ, ಆಗಸ್ಟ್ 31ರಂದು ಗಣೇಶ ಹಬ್ಬ ಆಚರಣೆ ಕುರಿತಂತೆ ನಿರ್ಧಾರ ಕೈಗೊಳ್ಳಲು ಆಗಸ್ಟ್ 30ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸೋದಕ್ಕಾಗಿ ನಾಗರೀಕರ ಒಕ್ಕೂಟ ಕೋರಿತ್ತು. ಆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೋರ್ಟ್ ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಸಲ್ಲಿಸೋದಕ್ಕೆ ಅವಕಾಶ ನೀಡಿದೆ ಎಂದರು.
BIG NEWS: 2027 ರವರೆಗೆ ʻಐಸಿಸಿ ಮಾಧ್ಯಮ ಹಕ್ಕುʼ ಪಡೆದ ʻಡಿಸ್ನಿ ಸ್ಟಾರ್ʼ – ICC ಘೋಷಣೆ | ICC media rights
ಈಗಾಗಲೇ ಗಣೇಶೋತ್ಸವಕ್ಕೆ ಅವಕಾಶ ಕೋರಿಕೆ ಸಲ್ಲಿಸಲಾಗಿದ್ದಂತ ಸಂಘಟನೆಗಳೊಂದೆಗೆ ಮಾತುಕತೆ ನಡೆಸಲಾಗಿದೆ. ಸಾರ್ವಜನಿಕರ ಜಾಗವಾದ ಕಾರಣ, ಗಣೇಶೋತ್ಸವ ಕೂರಿಸೋ ಉದ್ದೇಶ ಸರಿ ಇದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಈ ಸಂಬಂಧ ಆಗಸ್ಟ್ 30ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.
Rain In Karnataka : ರಾಜ್ಯದಲ್ಲಿ ಇನ್ನೂ 3 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ