ಧಾರವಾಡ : ವಾಹನ ತೊಳೆಯಲು ಹೋದಾಗ ಘೋರ ದುರಂತವೊಂದು ಸಂಭವಿಸಿದ್ದು, ಟಂಟಂ ವಾಹನ ತೊಳೆಯಲು ಹೋದಾಗ ತಂದೆ, ಮಗ ನೀರು ಪಾಲಾದ ಘಟನೆ ಧಾರವಾಡ ತಾಲೂಕಿನ ಕ್ಯಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ಯಾರೆಕೊಪ್ಪ ಗ್ರಾಮದ ಕರೆಯಲ್ಲಿ ಇಂದು ಬೆಳಗ್ಗೆ ಗದಿಗೆಪ್ಪ ಅಂಗಡಿ ಎಂಬುವರು ತಮ್ಮ ಮಗ ರವಿಯನ್ನು ಕರೆದುಕೊಂಡು ಟಂಟಂ ವಾಹನ ತೊಳೆಯಲು ಹೋಗಿದ್ದಾರೆ. ಈ ವೇಳೆ ಕೆರೆಯಲ್ಲಿ ಮುಳುಗಿ ಗದಿಗೆಪ್ಪ, ರವಿ ಮೃತಪಟ್ಟಿದ್ದಾರೆ. ಸದ್ಯ ತಂದೆ ಗದಿಗೆಪ್ಪನ ಮೃತದೇಹ ಪತ್ತೆಯಾಗಿದೆ. ಮಗ ರವಿ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
Good News : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ