ಚಿತ್ರದುರ್ಗ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ರೂ. 6000 ಹಾಗೂ ರಾಜ್ಯ ಸರ್ಕಾರದಿಂದ ರೂ.4000/-ಗಳನ್ನು ನೇರ ನಗದು ವರ್ಗಾವಣೆ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದ್ದು, ಈ ಯೋಜನೆಯು ನೈಜ ಫಲಾನುಭವಿಗಳಿಗೆ ದೊರೆಯಲಿ ಎಂಬ ಉದ್ದೇಶದಿಂದ ಇ-ಕೆವೈಸಿ ಮಾಡುವುದು ಅವಶ್ಯವಾಗಿದೆ.
BREAKING NEWS : ಶಿವಮೊಗ್ಗದಲ್ಲಿ `ಸ್ಟೆಬಿಲೈಜರ್’ ಸ್ಪೋಟಗೊಂಡು ಘೋರ ದುರಂತ : ತಂದೆ ಸಾವು, ಮಗನ ಸ್ಥಿತಿ ಗಂಭೀರ
ಚಿತ್ರದುರ್ಗ ತಾಲ್ಲೂಕಿನಲ್ಲಿ 38948 ರೈತರು ಪಿ.ಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದು, ಈಗಾಗಲೇ 28698 ರೈತರು ಇ-ಕೆವೈಸಿ ಪೂರ್ಣಗೊಳಿಸಿದ್ದು, ಈ ಬಗ್ಗೆ ಹೆಚ್ಚಿನ ಪ್ರಚಾರ ಕೈಗೊಂಡಿದ್ದರೂ 10250 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಉಳಿದಿದ್ದು, ಇ-ಕೆವೈಸಿ ಮಾಡಿಸದ್ದಿದಲ್ಲಿ ತಮ್ಮ ಖಾತೆಗಳಿಗೆ ಮುಂದಿನ ಕಂತಿನ ಹಣ ಸ್ಥಗಿತಗೊಳಿಸಲಿದ್ದು, ಕೂಡಲೇ ಎಲ್ಲಾ ರೈತರು ಮುಂದಿನ ಕಂತು ಪಡೆಯಲು ಇ-ಕೆವೈಸಿ ಮಾಡಿಸಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಹ ಫಲಾನುಭವಿಗಳು ಜಂಟಿ ಖಾತೆದಾರರಾಗಿದ್ದು, ಬೇರೆ ಬೇರೆ ಕುಟುಂಬದ ಸದಸ್ಯರಾಗಿದ್ದಲ್ಲಿ ಫ್ರೂಟ್ಸ್ ತಂತ್ರಾಂದಲ್ಲಿ ಖಾತೆಯನ್ನು ಸಮನಾಗಿ ಹಂಚಿಕೆ ಮಾಡಿ ಪಿ.ಎಂ ಕಿಸಾನ್ ಯೋಜನೆಯಡಿ ನೊಂದಾಯಿಸಲು ಅವಕಾಶವಿದೆ. 2019ರ ಫೆಬ್ರವರಿ 1 ನಂತರ ಪೌತಿ ಕಾರಣದಿಂದ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು 2022ರ ಮಾರ್ಚ್ 29ರ ಮಾರ್ಗಸೂಚಿಯ ಪ್ರಕಾರ ವಂಶವೃಕ್ಷದ ಆಧಾರದ ಮೇಲೆ ವಾರಸುದಾರರು ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ನೋಂದಾಯಿಸಲು ಅವಕಾಶ ಇದೆ. ಒಂದೇ ಕುಟುಂಬದ ಸದಸ್ಯರಲ್ಲಿ ವಯಸ್ಕ್ ಮಕ್ಕಳಿದ್ದಲಿ ಹಾಗೂ ಹಿರಿಯ ನಾಗರೀಕರು ಭೂ ಹಿಡುವಳಿ ಹೊಂದಿದಲ್ಲಿ ಯೋಜನೆಯಡಿ ನೋಂದಾಯಿಸು ಅವಕಾಶ ವಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ, ಪಂಗಡದ ಅರ್ಹ ರೈತರು ಯೋಜನೆಯಡಿ ನೊಂದಾಯಿಸಲು ಬಾಕಿ ಇದ್ದು, ಕೂಡಲೇ ನೊಂದಾಯಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಚಂದ್ರಕುಮಾರ್ ತಿಳಿಸಿದ್ದಾರೆ.