ಕಲಬುರಗಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿ.ಎಮ್. ಕಿಸಾನ್) ಯೋಜನೆಯಡಿ ಕೇಂದ್ರ ಸರ್ಕಾರದಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ರೈತರು 2022ರ ಸೆಪ್ಟೆಂಬರ್ 14 ರೊಳಗಾಗಿ ಸಮೀಪದ ಕಾಮನ್ ಸರ್ವೀಸ್ ಸೆಂಟರ್ಗಳಿಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BIGG NEWS : ಮೂಡಾ ನಿವೇಶನ ಹಗರಣ : ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕನಿಗೆ ಶುರುವಾಯ್ತು ಢವ ಢವ.!
ಇದಲ್ಲದೇ ರೈತರು ತಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸಿಕೊಳ್ಳಲು ಗ್ರಾಮ ಒನ್ ಕೇಂದ್ರ, ರೈತ ಸಂಪರ್ಕ ಕೇಂದ್ರ, ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲು, ಮೊಬೈಲ್ ಮೂಲಕ ಅಥವಾ ಸ್ಮಾರ್ಟ್ ಪೋನ್ ಬಳಸುತ್ತಿರುವ ರೈತರು ಪಿ.ಎಮ್. ಕಿಸಾನ್ ವೆಬ್ಪೋರ್ಟ್ಲ್ www.pmkisan.gov.in ತಂತ್ರಾಂಶದ ಮೂಲಕ 2022ರ ಸೆಪ್ಟೆಂಬರ್ 14ರೊಳಗಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. 2022ರ ಸೆಪ್ಟೆಂಬರ್ 14 ರೊಳಗಾಗಿ ಇ-ಕೆವೈಸಿ ಮಾಡಿಸದೇ ಇರುವ ರೈತರಿಗೆ ಯಾವುದೇ ಕಾರಣಕ್ಕೂ ಮುಂದಿನ ಕಂತಿನ ಹಣ ರೈತರ ಖಾತೆಗೆ ಜಮಾ ಆಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.