ಕೋಲಾರ : ಗ್ರಾಮದೇವತೆ ಮೆರವಣಿಗೆ ವೇಳೆ ದೇವರನ್ನು ಮುಟ್ಟಿದ್ದಾನೆ ಎಂದು ದಲಿತ ಸಮುದಾಯದ ಬಾಲಕನಿಗೆ 60 ಸಾವಿರ ರೂ.ದಂಡ ವಿಧಿಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ನಡೆದಿದೆ.
ಕಳೆದ 3 ದಿನಗಳ ಹಿಂದೆ ಹುಳ್ಳೆರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೆರವಣಿಗೆ ವೇಳೆ ಗ್ರಾಮದ ರಮೇಶ್, ಶೋಭಾ ದಂಪತಿಯ ಪುತ್ರ ಚೇತನ್ ದೇವರನ್ನು ಮುಟ್ಟಿದ್ದಾನೆ ಎಂದು ಅರೋಪಿಸಿ ಬೆದರಿಕೆ ಹಾಕಿ 60,000 ರೂ. ದಂಡ ವಿಧಿಸಲಾಗಿದೆ.
ಹುಳ್ಳೆರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೆರವಣಿಗೆ ಹೋಗಿದ್ದ ದಲಿತ ಸಮುದಾಯದ ಬಾಲಕ ಚೇತನ್ ದೇವರನ್ನು ಮುಟ್ಟಿದ್ದಾನೆ. ಹೀಗಾಗಿ ಬಾಲಕನ ಕುಟುಂಬಸ್ಥರಿಗೆ 60 ಸಾವಿರ ರೂ. ದಂಡ ವಿಧಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
SHOCKING NEWS: ರಸ್ತೆಯಲ್ಲಿ ವೃದ್ಧ ತಂದೆಗೆ ಮನಬಂದಂತೆ ಥಳಿಸಿದ ವ್ಯಕ್ತಿ; ವಿಡಿಯೋ ವೈರಲ್