ಬೆಂಗಳೂರು: ಮೋಟಾರು ವಾಹನ ಅಪಘಾತದಂತ ಪ್ರಕರಣದಲ್ಲಿ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದ ಹಕ್ಕಿಲ್ಲ. ಆದರೇ ಮೃತ ವಿವಾಹೇತರ ಸಂಬಂಧದ ಸಂತಾನಕ್ಕೂ ಪರಿಹಾರದ ಹಕ್ಕಿದೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ( Karnataka High Court ) ಮಹತ್ವದ ಆದೇಶದಲ್ಲಿ ತಿಳಿಸಿದೆ.
2012ರಲ್ಲಿ ಮೋಟಾರು ವಾಹನ ಅಪಘಾತದಲ್ಲಿ ( Motor vehicle accident ) ಮಲ್ಲಿಕಾರ್ಜುನ ಎಂಬುವರು ಮೃತಪಟ್ಟಿದ್ದರು. ಪರಿಹಾರ ನೀಡದ ವಿಮಾ ಕಂಪನಿಯಿಂದ ಪರಿಹಾರ ಕೋರಿ ಹೈಕೋರ್ಟ್ ಗೆ ಮೃತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆ, ಪುತ್ರ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ದ ನ್ಯಾಯಪೀಠವು, ವಿವಾಹೇತರ ಸಂಬಂಧ ಹೊಂದಿದ್ದಂತ ಮಹಿಳೆಗೆ ಪರಿಹಾರದಲ್ಲಿ ಹಕ್ಕಿಲ್ಲ. ಆದ್ರೇ ಆ ಸಂಬಂಧಕ್ಕೆ ಹುಟ್ಟಿದ ಪುತ್ರನಿಗೆ ಪರಿಹಾರದಲ್ಲಿ ಹಕ್ಕಿದೆ ಎಂದು ಅಭಿಪ್ರಾಯ ಪಟ್ಟರು.
ಇನ್ನೂ ಮೃತ ತಂದೆ-ತಾಯಿಗೆ ಪರಿಹಾರದಲ್ಲಿ ತಲಾ ಶೇ.30ರಷ್ಟು ನೀಡಬೇಕು. ಮೃತ ಪುತ್ರನಿಗೆ ಪರಿಹಾರದಲ್ಲಿ ಶೇ.40ರಷ್ಟು ನೀಡಬೇಕು ಎಂಬುದಾಗಿ ವಿಮಾ ಕಂಪನಿಗೆ ಹೈಕೋರ್ಟ್ ಏಕ ಸದಸ್ಯ ಪೀಠವು ನಿರ್ದೇಶನ ನೀಡಿತು.
BIGG NEWS : ಪಂಚಮಸಾಲಿಗೆ 2ಎ ಮೀಸಲಾತಿ : ಇಂದು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಘೋಷಣೆ?