ದಾವಣಗೆರೆ : ಹೊನ್ನಾಳಿ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಶಾಸಕ ರೇಣುಕಾಚಾರ್ಯ ವಿರುದ್ಧ ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಗಂಭೀರ ಆರೋಪ ಮಾಡಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ಶಾಸಕ ರೇಣುಕಾಚಾರ್ಯ ಅವರು ಸರ್ಕಾರಿ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿಕೊಂಡು ತಮ್ಮ ಸ್ವಂತ ಜಮೀನಿಗೆ 18 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಲೈನ್ ಹಾಕಿಸಿಕೊಂಡಿದ್ದಾರೆ. ತಮ್ಮ 35 ಎಕರೆ ಅಡಿಕೆ ತೋಟ ನಿರ್ಮಾಣ ಮಾಡಲು ಸಾವಿರಾರು ಲೋಡು ಮಣ್ಣ ಬಳಸಿಕೊಂಡಿದ್ದಾರೆ ಎಂದು ಶಾಂತನಗೌಡ ಆರೋಪ ಮಾಡಿದ್ದಾರೆ.
ಇನ್ನು ಹೊನ್ನಾಳಿ ತಾಲೂಕಿನ ಮಾಸಡಿ ಮುಖ್ಯರಸ್ತೆಯಿಂದ ತನ್ನ ಜಮೀನಿಗೆ 6 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಾರೆ. ರೇಣುಕಾಚಾರ್ಯರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.
SHOCKING NEWS: ಶೌಚಾಲಯದಲ್ಲೇ ಕಬಡ್ಡಿ ಆಟಗಾರರಿಗೆ ಊಟದ ವ್ಯವಸ್ಥೆ, ಉತ್ತರ ಪ್ರದೇಶದಲ್ಲಿ ಘಟನೆ … ವಿಡಿಯೋ ವೈರಲ್