ಕೆಎನ್್ಎನ್ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿ ಅವ್ರು ತಮ್ಮ ಜನ್ಮದಿನದಂದು (ಸೆಪ್ಟೆಂಬರ್ 17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದ ನಮೀಬಿಯಾದಿಂದ ತರಲಾದ ಚಿರತೆಗಳನ್ನ ಮುಕ್ತಗೊಳಿಸಿದರು.ನಿನ್ನೆ ಎರಡು ಚಿರತೆಗಳನ್ನ ಬಿಡಲಾಗಿತ್ತು.ಇದಾದ ಬಳಿಕ ಅಲ್ಲಿದ್ದ ಚೀತಾ ಗೆಳೆಯರೊಂದಿಗೂ ಪ್ರಧಾನಿ ಮಾತುಕತೆ ನಡೆಸಿದರು.ಈ ವೇಳೆ ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.ಈಗ ಚಿರತೆಯನ್ನ ತೋರಿಸುವಂತೆ ಅನೇಕರು ಒತ್ತಡ ಹೇರುತ್ತಾರೆ. ಆದ್ರೆ, ನೀವು ಒತ್ತಡಕ್ಕೆ ಮಣಿಯಬೇಡಿ ಎಂದರು.
ಪ್ರಧಾನಮಂತ್ರಿಯವರು ಚೀತಾ ಸ್ನೇಹಿತರಿಗೆ, “ನೀವು ಈ ಕೆಲಸವನ್ನ ಪ್ರಾರಂಭಿಸಿದ ಕೂಡಲೇ, ಮೊದಲ ಸಮಸ್ಯೆ ಏನಾಗಲಿದೆ.? ನನ್ನಂತಹ ನಾಯಕರ ದೊಡ್ಡ ಸಮಸ್ಯೆಯನ್ನ ಎದುರಿಸುತ್ತೀರಿ. ಕೆಲವು ದಿನಗಳವರೆಗೆ ಚೀತಾವನ್ನ ನೋಡಲು ಬರಬೇಡಿ ಎಂದು ನಿಮಗೆ ಹೇಳಬೇಕು. ಅವರು ಇದೀಗ ಇಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ಅವಕಾಶ ನೀಡಬೇಕು. ಆದ್ರೆ, ನಾವು ನಾಯಕರು ಬರುತ್ತೇವೆ. ನಾಯಕರ ಸಂಬಂಧಿಕರು ಬರುತ್ತಾರೆ. ಟಿವಿ ಜನರು ಬರುತ್ತಾರೆ. ನಿಮ್ಮ ಮೇಲೆ ಒತ್ತಡ ಹೇರುತ್ತದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಲಿದ್ದಾರೆ. ಆದ್ರೆ, ಯಾರನ್ನೂ ಒಳಗೆ ಬಿಡದಿರುವುದು ನಿಮ್ಮ ಕೆಲಸ. ನಾನು ಬಂದರೆ, ನನ್ನನ್ನು ಒಳಗೆ ಹೋಗಲು ಬಿಡಬೇಡಿ. ನನ್ನ ಸಂಬಂಧಿಕರಲ್ಲಿ ಯಾರಾದರೂ ನನ್ನ ಹೆಸರೇಳಿ ಬಂದರೆ, ಅವರಿಗೂ ಪ್ರವೇಶಿಸಲು ಅವಕಾಶ ನೀಡಬೇಡಿ. ಇಲ್ಲಿನ ಹವಾಮಾನದಲ್ಲಿ ಚೀತಾಗಳು ನೆಲೆಸುವ ಸಮಯ ಮುಗಿಯುವವರೆಗೆ ಯಾರನ್ನೂ ಒಳಗೆ ಹೋಗಲು ಬಿಡಬೇಡಿ” ಎಂದರು.
ಚೀತಾ ಮಿತ್ರರು ಸುಮಾರು 400 ಯುವಕರ ಗುಂಪಾಗಿದ್ದು, ಚೀತಾಗಳ ಪ್ರಾಮುಖ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ತರಬೇತಿ ಪಡೆದಿದ್ದಾರೆ. ಚೀತಾ ಫ್ರೆಂಡ್ಸ್ ಜೊತೆಗಿನ ಸಂವಾದದಲ್ಲಿ ಪ್ರಧಾನಮಂತ್ರಿಯವರು, ಚೀತಾಗಳು ತಮ್ಮ ಹೊಸ ಆಶ್ರಯಕ್ಕೆ ಒಗ್ಗಿಕೊಳ್ಳದ ಹೊರತು, ಅವರು (ಮೋದಿ) ಸೇರಿದಂತೆ ಯಾರಿಗಾದರೂ ಕೆ.ಎನ್.ಪಿ.ಯೊಳಗೆ ಪ್ರವೇಶಿಸಲು ಅವಕಾಶ ನೀಡಬೇಡಿ ಎಂದು ಹೇಳಿದರು. ಇನ್ನು ಇದೇ ವೇಳೆ ತಾವು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗ ಗಿರ್ನಲ್ಲಿ ಏಷ್ಯಾಟಿಕ್ ಸಿಂಹಗಳನ್ನ ರಕ್ಷಿಸಲು ಗ್ರಾಮಸ್ಥರನ್ನ ಹೇಗೆ ಸೇರಿಸಿಕೊಂಡಿದ್ದೆ ಎಂಬುದನ್ನ ಪ್ರಧಾನಮಂತ್ರಿಯವರು ಸ್ಮರಿಸಿದರು.