ನವದೆಹಲಿ : ದೇಶವಾಸಿಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಜನರ ಸೇವಕರು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ದೇಶದ ಜನರ ಬಗ್ಗೆ ಅವರಿಗೆ ಉತ್ತರದಾಯಿತ್ವವಿದೆ. ನ್ಯಾಯಾಧೀಶರು ಕೂಡ ಹೀಗೆಯೇ ಯೋಚಿಸಬೇಕು ಎಂದರು.
ಇನ್ನು “ನಾವು ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿದ್ದೇವೆ. ನ್ಯಾಯಾಂಗದಲ್ಲಿ ಕೆಲಸ ಮಾಡುತ್ತಿರುವವರೂ ಹೀಗೆ ಯೋಚಿಸಬೇಕು. ಇದರೊಂದಿಗೆ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದ್ದು, ಮೋದಿ ಸರಕಾರವು ಸಂವಿಧಾನದ ನೆರವಿನಿಂದ ದೇಶವನ್ನ ನಡೆಸುತ್ತದೆ. ಅದನ್ನ ಹಾಳು ಮಾಡಲು ಯಾರೋ ಪ್ರಯತ್ನಿಸುತ್ತಾರೆ. ಆದ್ರೆ, ದೇಶದ ಜನರು ಇದರ ಬಗ್ಗೆ ಯೋಚಿಸಬೇಕು ” ಎಂದು ಕಿರಣ್ ರಿಜಿಜು ಹೇಳಿದರು. ಇದರೊಂದಿಗೆ ಉನ್ನತ ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದರು.
ಬದ್ಧತೆಯಿರುವ ನ್ಯಾಯಾಧೀಶರು ಎಂದರೆ ರಾಷ್ಟ್ರಕ್ಕೆ ಬದ್ಧರಾಗಿರುವವರು ಹೊರತು ಕಾರ್ಯಾಂಗಕ್ಕೆ ಅಲ್ಲ ಎಂದು ಹೇಳಿದರು. ಸೋಮವಾರ ತಡರಾತ್ರಿ ನಡೆದ ಅಖಿಲ ಭಾರತ ವಕೀಲರ ಪರಿಷತ್ತಿನ 16ನೇ ಅಧಿವೇಶನದಲ್ಲಿ ರಿಜಿಜು ಅವ್ರು, ‘ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ವೈಮನಸ್ಯವಿದೆ ಮತ್ತು ಸರ್ಕಾರವು ನ್ಯಾಯಾಂಗವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿಕೆಗಳನ್ನ ನೀಡುತ್ತವೆ ಮತ್ತು ಅನೇಕ ಬಾರಿ ಸುದ್ದಿ ವಾಹಿನಿಗಳು ಸುದ್ದಿಗೆ ಮಸಾಲೆ ಹಾಕಲು ಹೀಗೆ ಮಾಡುತ್ತವೆ. ಆದರೆ ಪ್ರಧಾನಿ ಮೋದಿಯವರು ಯಾವಾಗಲೂ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದೆ ಮತ್ತು ದೇಶವು ಸಂವಿಧಾನದ ಮೇಲೆ ಮಾತ್ರ ನಡೆಯುತ್ತದೆ ಎಂದರು.
ನ್ಯಾಯಾಧೀಶರು ದೇಶಕ್ಕೆ ಬದ್ಧರಾಗಿರಬೇಕು.!
ನ್ಯಾಯಾಧೀಶರು ದೇಶಕ್ಕೆ ಬದ್ಧರಾಗಿರಬೇಕು ಹೊರತು ಕಾರ್ಯಾಂಗಕ್ಕೆ ಅಲ್ಲ ಎಂದು ರಿಜಿಜು ಹೇಳಿದರು. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವಕರು ಎಂದರು. ದೇಶದ ಜನರ ಬಗ್ಗೆ ಅವರಿಗೆ ಉತ್ತರದಾಯಿತ್ವವಿದೆ. ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ನಡೆಯಬೇಕು. ಹೀಗಾದರೆ ಯಾರಿಗೂ ಬೆರಳು ತೋರಿಸಲು ಅವಕಾಶ ಸಿಗುವುದಿಲ್ಲ. ನ್ಯಾಯಾಂಗವನ್ನ ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಯಾರಾದರೂ ಹೇಳಿದಾಗ, ಹಾಗೆ ಹೇಳಿದವರು ತಮ್ಮೊಳಗೆ ನೋಡಬೇಕು ಎಂದು ರಿಜಿಜು ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಇದನ್ನು ತಪ್ಪಾಗಿಯೂ ಮಾಡುವುದಿಲ್ಲ ಎಂದರು.
BIGG NEWS : ಬೆಳಗಾವಿ ಗಡಿ ವಿವಾದ : ‘ಮಹಾ’ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ‘ಖಂಡನಾ ನಿರ್ಣಯ’ ಅಂಗೀಕಾರ
BIGG NEWS : ಬೆಳಗಾವಿ ಗಡಿ ವಿವಾದ : ‘ಮಹಾ’ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ‘ಖಂಡನಾ ನಿರ್ಣಯ’ ಅಂಗೀಕಾರ
Viral Video : ಕೊರೊನಾದಿಂದ ಪಾರಾಗಲು ಚೀನಾ ದಂಪತಿಗಳ ಮಸ್ತ್ ಪ್ಲ್ಯಾನ್, ಮಾಡಿದ್ದೇನು ಗೊತ್ತಾ.?