ನವದೆಹಲಿ : ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ನಮೂದನ್ನ ಅಳಿಸಬಾರದು ಎಂದು ಚುನಾವಣಾ ಆಯೋಗ ಸೋಮವಾರ ಹೇಳಿದೆ.
ಈ ವಿಷಯದ ಬಗ್ಗೆ ಕೆಲವು ಮಾಧ್ಯಮ ವರದಿಗಳ ನಂತ್ರ ಆಯೋಗವು ಪ್ರತಿಕ್ರಿಯಿಸಿದೆ. “ಮಾಧ್ಯಮಗಳಲ್ಲಿ ವರದಿಯಾದ ವರದಿಗಳನ್ನ ಉಲ್ಲೇಖಿಸಿ, ಫಾರ್ಮ್ -6ಬಿಯಲ್ಲಿ ಆಧಾರ್ ಸಲ್ಲಿಸುವುದು ಸ್ವಯಂಪ್ರೇರಿತವಾಗಿದೆ ಅನ್ನೋದನ್ನ ಗಮನಿಸಬಹುದು. ಆಧಾರ್ ಸಲ್ಲಿಸದ ಕಾರಣ ಮತದಾರರ ಪಟ್ಟಿಯಲ್ಲಿನ ಯಾವುದೇ ನಮೂದನ್ನ ಅಳಿಸಲಾಗುವುದಿಲ್ಲ” ಎಂದು ಚುನಾವಣಾ ಆಯೋಗ ಹೇಳಿದೆ.
ಈ ವರ್ಷದ ಜುಲೈ 4ರಂದು ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೀಡಿದ ಪತ್ರವನ್ನ ಚುನಾವಣಾ ಆಯೋಗವು ಉಲ್ಲೇಖಿಸಿದೆ. ಇನ್ನು ಅದು ಮತದಾರರ ಪಟ್ಟಿಯಿಂದ ಆಧಾರ್ ಲಿಂಕ್ʼನ್ನ ಅವ್ರು ಸ್ವಯಂಪ್ರೇರಿತವಾಗಿ ಮಾಡಬೇಕು ಎಂದು ಹೇಳಿದೆ.
ಮತದಾರರ ಪಟ್ಟಿಯ ದತ್ತಾಂಶದೊಂದಿಗೆ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಲು, ಮತದಾರರ ಆಧಾರ್ ವಿವರಗಳನ್ನ ಪಡೆಯಲು ಮಾರ್ಪಡಿಸಿದ ನೋಂದಣಿ ನಮೂನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಸ್ತಿತ್ವದಲ್ಲಿರುವ ಮತದಾರರ ಆಧಾರ್ ಸಂಖ್ಯೆಯನ್ನ ಸಂಗ್ರಹಿಸಲು ಹೊಸ ಫಾರ್ಮ್ 6ಬಿ ಅನ್ನು ಸಹ ಪರಿಚಯಿಸಲಾಗಿದೆ.
“ಸೆಕ್ಷನ್ 23ರ ತಿದ್ದುಪಡಿಯು ಮತದಾರರ ಗುರುತಿನ ಚೀಟಿ ಮತ್ತು ಮತದಾರರ ಪಟ್ಟಿಯಲ್ಲಿ ನಮೂದುಗಳ ದೃಢೀಕರಣವನ್ನ ಸ್ಥಾಪಿಸುವುದು ಮತ್ತು ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಒಂದೇ ವ್ಯಕ್ತಿಯ ಹೆಸರನ್ನ ನೋಂದಾಯಿಸುವುದನ್ನ ಗುರುತಿಸುವುದಾಗಿದೆ ಎಂದು ಮತದಾರರಿಂದ ಆಧಾರ್ ಸಂಗ್ರಹಿಸುವ ಉದ್ದೇಶವನ್ನ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕಾರ್ಯಕ್ರಮದ ಉದ್ದೇಶವು ಕಾನೂನು ನಿಬಂಧನೆಗಳೊಂದಿಗೆ ಹೊಂದಿಕೆಯಾಗಿದೆ. ಮತದಾರರ ಕಡೆಯಿಂದ ಆಧಾರ್ ಸಲ್ಲಿಕೆ ಸ್ವಯಂಪ್ರೇರಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ” ಎಂದು ಚುನಾವಣಾ ಆಯೋಗದ ಪತ್ರದಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಮತದಾರನು ಆಧಾರ್ ಸಂಖ್ಯೆಯನ್ನು ಹೊಂದಿಲ್ಲದಿದ್ದರೆ ಮತ್ತು ಆ ಮೂಲಕ ಅವನ / ಅವಳ ಆಧಾರ್ ಸಂಖ್ಯೆಯನ್ನ ನೀಡಲು ಸಾಧ್ಯವಾಗದಿದ್ದರೆ, ಫಾರ್ಮ್ 6 ಬಿ ಯಲ್ಲಿ ಉಲ್ಲೇಖಿಸಲಾದ ಹನ್ನೊಂದು ಪರ್ಯಾಯ ದಾಖಲೆಗಳಲ್ಲಿ ಯಾವುದಾದರೂ ಪ್ರತಿಯನ್ನ ಸಲ್ಲಿಸುವಂತೆ ಕೇಳಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.