ಶಿವಮೊಗ್ಗ : ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಣ ಗಿಫ್ಟ್ ಹೋಗಿರುವ ವಿಚಾರದ ಕುರಿತಂತೆ ಗೃಹ ಸಚಿವ ಅರಗಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS : ಪ್ರಧಾನಿ ಮೋದಿ `ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ ಮುಖ್ಯಾಂಶಗಳು ಹೀಗಿದೆ|Mann Ki Baat
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಕರ್ತರಿಗೆ ಗಿಫ್ಟ್ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಪತ್ರಕರ್ತರಿಗೆ ಹಣ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಅದು ಸ್ವೀಟ್ ಬಾಕ್ಸ್. ಎಲ್ಲಾ ಸರ್ಕಾರದಲ್ಲೂ ಪತ್ರಕರ್ತರಿಗೆ ಗಿಫ್ಟ್ ನೀಡುತ್ತಾರೆ. ಪತ್ರಕರ್ತರಿಗೆ ಹಣ ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ರಾಜಕೀಯ ವರದಿಗಾರಿಕೆ ವಿಭಾಗದಲ್ಲಿರುವ ಕೆಲವು ಹಿರಿಯ ಪತ್ರಕರ್ತರಿಗೆ ಅ.22 ರಂದು ಹಬ್ಬದ ಉಡುಗೊರೆ ಬಾಕ್ಸ್ ಗಳಲ್ಲಿ ಸಿಹಿ ಹಾಗೂ ಡ್ರೈ ಫ್ರೂಟ್ಸ್ ಇರುವ ಬಾಕ್ಸ್ ಗಳು ಹಾಗೂ ಒಂದು ಲಕ್ಷ ರೂಪಾಯಿ ನಗದು ಇರುವ ಲಕೋಟೆ ಬಂದಿತ್ತು ಎಂದು ಕಾಂಗ್ರೆಸ್ ಆರೋಪಿಸಿತ್ತು.
ರೆಡಿ, ಸ್ಟೆಡಿ, ಗೋ: ʻಭಾರತ್ ಜೋಡೋ ಯಾತ್ರೆʼ ವೇಳೆ ಮಕ್ಕಳೊಂದಿಗೆ ʻರಾಹುಲ್ ಗಾಂಧಿʼ ರನ್ನಿಂಗ್ ರೇಸ್ | Watch Video