ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ/ವಿಡಿಯೋ ಮಾಡದಂತೆ ರಾಜ್ಯ ಸರ್ಕಾರ ನಿಷೇಧ ಹೇರಿ ವಾಪಸ್ ಪಡೆದ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದು, ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ ಎಂದು ತಿಳಿಸಿದ್ದಾರೆ.
BREAKING NEWS: ಆನೇಕಲ್ ನಲ್ಲಿ ಬೆಳ್ಳಂಬೆಳಗ್ಗೆ ಬರ್ಬರ ಹತ್ಯೆ; ಅನೈತಿಕ ಸಂಬಂಧ ಶಂಕಿಸಿ ಪತ್ನಿನೇ ಕೊಂದ ಕಿರಾತಕ ಪತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಲ್ಲಿ ಫೋಟೋ/ವಿಡಿಯೋ ಬಂದ್ ಮಾಡುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೆಲವು ನೌಕರರ ಮನವಿ ಇತ್ತು. ಹೆಣ್ಣು ಮಕ್ಕಳ ಫೋಟೋ, ವೀಡಿಯೋ ಎಲ್ಲ ಮಾಡ್ತಾರೆ ಅಂತಿತ್ತು. ಅವರ ಮನವಿ ಒಂದು ಅರ್ಥದಲ್ಲಿ ಸರಿ ಇತ್ತು. ಯಾರು ಏನೇ ಹೇಳಲಿ. ಮೊದಲು ಯಾವ ರೀತಿ ಇತ್ತೋ ಅದೇ ರೀತಿ ನಿಯಮ ಇರಬೇಕು. ಅದಕ್ಕೆ ತಾತ್ವಿಕ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ನಿನ್ನೆ ಪ್ರವಾಹ ಪೀಡಿತ ಡಿಸಿಗಳ ಜೊತೆ ಮಾತಾಡಿದ್ದೇನೆ. ಅಲ್ಲಿನ ಸ್ಥಳೀಯ ನದಿಗಳ ಪ್ರವಾಹದ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ನದಿ ಪಾತ್ರದ ಪಕ್ಕದಲ್ಲಿ ಇರೋರ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ.