ಬೆಂಗಳೂರು : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ? ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ? ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು. ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಹೇಳಿದೆ.
ಕೆಪಿಸಿಸಿ ಅಧ್ಯಕ್ಷ @DKShivakumar ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು. ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು.
ಇನ್ನೊಮ್ಮೆ ಬಂಡೆಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು.#ತಲೆಮಾರುದೇಶಮಾರು
— BJP Karnataka (@BJP4Karnataka) July 22, 2022
Big news : ಕೇರಳದ ವಯನಾಡಿನ ಎರಡು ಫಾರ್ಮ್ಗಳಲ್ಲಿ ‘ಆಫ್ರಿಕನ್ ಹಂದಿ ಜ್ವರ’ ವರದಿ | African swine fever
ಸಚಿವರಾಗಿದ್ದ ಕೆಜೆ ಜಾರ್ಜ್ ಅವರ ಸ್ಟೀಲ್ ಬ್ರಿಡ್ಜ್ ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ! ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು ಎಂದು ಟ್ವೀಟ್ ಮಾಡಿದೆ.