ನವದೆಹಲಿ : ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ದೀಪಾವಳಿಗೂ ಮುನ್ನ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಎಲ್ಲಾ ಗ್ರೂಪ್ ಸಿ ಮತ್ತು ಗ್ರೂಪ್ ಬಿ (Non-Gazetted) ಉದ್ಯೋಗಿಗಳಿಗೆ ಉತ್ಪಾದನಾ ಆಧಾರಿತ ಬೋನಸ್ (PLB) ನೀಡಲಾಗುವುದು ಎಂದು ಇಪಿಎಫ್ಒ ಘೋಷಿಸಿದೆ.
ಈ ಬೋನಸ್ ಅಡಿಯಲ್ಲಿ ಅರ್ಹ EPFO ಉದ್ಯೋಗಿಗಳು ರೂ. 13.806 ಗರಿಷ್ಠ ಸಿಗಲಿದೆ. ಗ್ರೂಪ್ ಬಿ ಮತ್ತು ಸಿ ಗುಂಪಿನ ಎಲ್ಲಾ ತಾತ್ಕಾಲಿಕ ಮತ್ತು ಖಾಯಂ ಉದ್ಯೋಗಿಗಳಿಗೆ ಬೋನಸ್ ನೀಡಲಾಗುವುದು ಎಂದು ಇಪಿಎಫ್ಒ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಆದಾಗ್ಯೂ, ಕ್ಯಾಶುಯಲ್, ಗುತ್ತಿಗೆ ಮತ್ತು ಹೆಚ್ಚುವರಿ ಉದ್ಯೋಗಿಗಳು ಬೋನಸ್ಗೆ ಅರ್ಹರಲ್ಲ.