ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಹಾಕಿದ್ದ ರಾತ್ರಿ ನಿರ್ಬಂಧವನ್ನು ಹಿಂತೆಗೆಯಲಾಗಿದ್ದು, 144 ಸೆಕ್ಷನ್ ಅನ್ನು ಆಗಸ್ಟ್ 14 ರವರೆಗೆ ಮುಂದುವರೆಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್: 10 ನೇ ದಿನದ ಆಟದಲ್ಲಿ ಭಾರತಕ್ಕೆ ಪದಕಗಳ ಸುರಿಮಳೆ!
ಪ್ರವೀಣ್ ನೆಟ್ಟಾರು ಹಾಗೂ ಫಾಜಿಲ್ ಹತ್ಯೆ ಬಳಿಕ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಆಗಸ್ಟ್ 4 ರಂದು ರಾತ್ರಿ ನಿರ್ಬಂಧವನ್ನು ತುಸು ಸಡಿಲಿಕೆ ಮಾಡಲಾಗಿತ್ತು. ಈಗ ರಾತ್ರಿ ನಿರ್ಬಂಧ ಸಂಪೂರ್ಣ ಹಿಂಪಡೆಯಲಾಗಿದೆ.
BREAKING NEWS : ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರ : ಇಂದು ಶಾಲೆಗಳಿಗೆ ರಜೆ ಘೋಷಣೆ