ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ಜವಾಹರ್ ಲಾಲ್ ನೆಹರೂ ಫೋಟೋ ಹಾಕದಿರುವುದಕ್ಕೆ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
BIGG NEWS : ಲಂಚ-ಮಂಚ ಹೇಳಿಕೆ ವಿಚಾರ : ಶಾಸಕ ಪ್ರಿಯಾಂಕ್ ಖರ್ಗೆ ಬಂಧನಕ್ಕೆ ಮಾಜಿ ಸಿಎಂ `BSY’ ಆಗ್ರಹ
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮೇರು ನಾಯಕ ನೆಹರು ಅವರ ಚಿತ್ರವನ್ನು ಕೈಬಿಡಲು ಕಾರಣವೇನು? ತಮ್ಮ ದೆಹಲಿ ದೊರೆಗಳನ್ನು ಮೆಚ್ಚಿಸಲೇ? ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಸಂಘಪರಿವಾರವನ್ನು ಮೆಚ್ಚಿಸಲೇ? ಕ್ಷಮೆ ಕೇಳಿದ ಸಾವರ್ಕರ್ಗೆ ಇರುವ ಜಾಗ ಹೋರಾಟಗಾರ ನೆಹರುರವರಿಗೆ ಇಲ್ಲವೇಕೆ? ಅಥವಾ ದೇಶದ ಸ್ವಾತಂತ್ರದ ಬಗ್ಗೆಯೇ ಅಸಹನೆಯೇ ಎಂದು ಕಿಡಿಕಾರಿದೆ.
'@CMofKarnataka ಅವರೇ, ಮೇರು ನಾಯಕ ನೆಹರು ಅವರ ಚಿತ್ರವನ್ನು ಕೈಬಿಡಲು ಕಾರಣವೇನು?
>ತಮ್ಮ ದೆಹಲಿ ದೊರೆಗಳನ್ನು ಮೆಚ್ಚಿಸಲೇ?
>ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಸಂಘಪರಿವಾರವನ್ನು ಮೆಚ್ಚಿಸಲೇ?
>ಕ್ಷಮೆ ಕೇಳಿದ ಸಾವರ್ಕರ್ಗೆ ಇರುವ ಜಾಗ ಹೋರಾಟಗಾರ ನೆಹರುರವರಿಗೆ ಇಲ್ಲವೇಕೆ?
>ಅಥವಾ ದೇಶದ ಸ್ವಾತಂತ್ರದ ಬಗ್ಗೆಯೇ ಅಸಹನೆಯೇ?#FreedomMarch
— Karnataka Congress (@INCKarnataka) August 14, 2022
ಬಸವರಾಜ ಬೊಮ್ಮಾಯಿ ಅವರೇ ತಮ್ಮ ಸರ್ಕಾರ ನೀಡಿದ ಜಾಹೀರಾತಿನಲ್ಲಿ ನೆಹರುರವರ ಚಿತ್ರ ಏಕಿಲ್ಲ? 9 ವರ್ಷ ಜೈಲು ಶಿಕ್ಷೆ ಅನುಭವಿಸಿದ, ಸ್ವತಂತ್ರ ಚಳವಳಿಯ ಮುಂಚೂಣಿ ನಾಯಕ ನೆಹರುರವರನ್ನು ನೀವೆಷ್ಟೇ ದ್ವೇಷಿಸಿದರೂ, ಪ್ರಯತ್ನಿಸಿದರೂ ದೇಶದ ಇತಿಹಾಸದಿಂದ ಅವರ ಕೊಡುಗೆ ಅಳಿಸುವುದು ಅಸಾಧ್ಯ. ನಿಮ್ಮ ಈ ದ್ವೇಷ ನಿಮ್ಮನ್ನೇ ಸುಡಲಿದೆ ಎಂದು ಆಕ್ರೋಶ ಹೊರಹಾಕಿದೆ.
ಮಾನ್ಯ @BSBommai ಅವರೇ,
ತಮ್ಮ ಸರ್ಕಾರ ನೀಡಿದ ಜಾಹೀರಾತಿನಲ್ಲಿ ನೆಹರುರವರ ಚಿತ್ರ ಏಕಿಲ್ಲ?9 ವರ್ಷ ಜೈಲು ಶಿಕ್ಷೆ ಅನುಭವಿಸಿದ,
ಸ್ವತಂತ್ರ ಚಳವಳಿಯ ಮುಂಚೂಣಿ ನಾಯಕ ನೆಹರುರವರನ್ನು ನೀವೆಷ್ಟೇ ದ್ವೇಷಿಸಿದರೂ, ಪ್ರಯತ್ನಿಸಿದರೂ ದೇಶದ ಇತಿಹಾಸದಿಂದ ಅವರ ಕೊಡುಗೆ ಅಳಿಸುವುದು ಅಸಾಧ್ಯ.ನಿಮ್ಮ ಈ ದ್ವೇಷ ನಿಮ್ಮನ್ನೇ ಸುಡಲಿದೆ.#FreedomMarch pic.twitter.com/n76JiHyLH7
— Karnataka Congress (@INCKarnataka) August 14, 2022
BIGG NEWS : ಶಿವಮೊಗ್ಗದಲ್ಲಿ ಅಶಾಂತಿ ವಾತಾವರಣ ಸೃಷ್ಟಿಗೆ ಯತ್ನ : ಸಂಸದ ಬಿ.ವೈ. ರಾಘವೇಂದ್ರ