ಬೆಂಗಳೂರು : ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರಸ್ತುತ 2022-23 ನೇ ಸಾಲಿನ ಶೈಕ್ಷಣಿ ವರ್ಷದ ದಾಖಲಾತಿ ಪ್ರಕ್ರಿಯೆ ಅಂತಿಮ ದಿನಾಂಕ ವಿಸ್ತರಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
BIGG NEWS : ಹರ್ ಘರ್ ತಿರಂಗಾ ಅಭಿಯಾನ : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾರ್ಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರಸ್ತುತ 2022-23 ನೇ ಸಾಲಿನ ಶೈಕ್ಷಣಿ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ದಿನಾಂಕ 31-07-2022 ರ ವರೆಗೆ ಅಂತಿಮಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇನ್ನೂ ಕೆಲವು ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹಾಗೂ ಪ್ರಸ್ತುತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಹೊಸದಾಗಿ ಶಾಲೆಗಳ ನೋಂದಣಿಗೆ ಕಾಲಾವಕಾಶವನ್ನು ದಿನಾಂಕ 30-07-2022 ರವರೆಗೆ ವಿಸ್ತರಿಸಿ ನಿಗಧಿಪಡಿಸಿರುವುದರಿಂದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲಾ ದಾಖಲಾತಿಯನ್ನು ದಿನಾಂಕ 10-08-2022 ರವರೆಗೆ ವಿಸ್ತರಿಸಲಾಗಿದೆ.