ಬೆಂಗಳೂರು : ಕೊರೊನಾ ವೈರಸ್ ಬೆನ್ನಲ್ಲೇ ರಾಜ್ಯದಲ್ಲಿ ಡೆಂಗ್ಯೂ ಅಬ್ಬರ ಹೆಚ್ಚಳವಾಗಿದ್ದು, ಕಳೆದ 2 ವಾರಗಳಲ್ಲಿ 250 ಕ್ಕೂಹೆಚ್ಚು ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,024 ಕ್ಕೆ ಏರಿಕೆಯಾಗಿದೆ.
ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅಕ್ಟೋಬರ್ ತಿಂಗಳ ಮೊದಲ ಎರಡು ವಾರಗಳಲ್ಲಿ 250 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಪ್ರಸಕ್ತ ವರ್ಷದ ಒಟ್ಟಾರೆ ಪ್ರಕರಣಗಳು 7 ಸಾವಿರದ ಗಡಿ ದಾಟಿವೆ. ಅಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂವರೆ ತಿಂಗಳು ಮುಂಚೆಯೇ ಪ್ರಕರಣಗಳು 7 ಸಾವಿರದ ಗಡಿ ದಾಟಿವೆ.ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಸೇರಿ 23 ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ಏರಿಕೆ ಕಂಡಿವೆ. ಇನ್ನೂ ಕಳೆದ ವರ್ಷ ರಾಜ್ಯದಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 7,189 ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಈ ವರ್ಷ ದೃಢಪಟ್ಟಿರುವ ಒಟ್ಟು ಡೇಂಘಿ ಪ್ರಕರಣಗಳಲ್ಲಿ ಶೇ. 40 ರಷ್ಟು ಬೆಂಗಳೂರಿನಲ್ಲಿ 1,227 ಕೇಸ್ ಪತ್ತೆಯಾದರೆ, ಮೈಸೂರು 605, ಉಡುಪಿ 407, ಚಿತ್ರದುರ್ಗ 328, ದಕ್ಷಿಣ ಕನ್ನಡ 306, ವಿಜಯಪುರ 305, ಕಲಬುರಗಿ 278, ಬೆಳಗಾವಿ 265, ಶಿವಮೊಗ್ಗ 263, ಮಂಡ್ಯ 249, ಚಿಕ್ಕಬಳ್ಳಾಪುರ 237, ಹಾಸನ 217, ಕೋಲಾಆರ 200, ಧಾರವಾಡ 199, ಚಾಮರಾಜನಗರ 197, ದಾವಣಗೆರೆ 194, ಕೊಪ್ಪಳ162, ಬಳ್ಳಾರಿ 143, ತುಮಕೂರು 140, ಚಿಕ್ಕಮಗಳೂರು 138, ಬಾಗಲಕೋಟೆ 129, ರಾಮನಗರ 115 ಮತ್ತು ಗದಗ 106 ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.
BIGG NEWS : `KPSC’ ಯಿಂದ ವಿವಿಧ ಇಲಾಖೆಗಳ 730 ಹುದ್ದೆಗಳ ಫಲಿತಾಂಶ ಪ್ರಕಟ