ಬೆಂಗಳೂರು : ರಾಜ್ಯದಲ್ಲಿನ ಎಲ್ಲಾ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ರಾಜ್ಯ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.
BIGG NEWS : ಇಂದು ದೇಶಾದ್ಯಂತ `NEET’ ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕೈದಿಗಳಿಗೆ ದಿನಗೂಲಿ 200 ರೂ. ನೀಡಲಾಗುತ್ತಿದ್ದು, ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಟ ಕೂಲಿ 525 ರೂ. ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ 7 ಕೋಟಿ ರೂ. ವಿಶೇಷ ಅನುದಾನ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
Good News : ಬೆಂಗಳೂರಿನಲ್ಲಿ ಜುಲೈ 28 ಮೊದಲ ʼನಮ್ಮ ಕ್ಲಿನಿಕ್ʼ ಕಾರ್ಯಾರಂಭ : ಆರೋಗ್ಯ ಸಚಿವ ಡಾ.ಕೆ ಸುಧಾಕರ್
ಸ್ವಾತಂತ್ರ್ಯ ದಿನದ ಅಂಗವಾಗಿ ಸನ್ನಡತೆ ಆಧಾರದ ಮೇಲೆ 84 ಕೈದಿಗಳನ್ನು ಬಿಡುಗಡೆ ಮಾಡಲಾಗ್ತಿದೆ. ಆಜಾದಿ ಕಾ ಅಮೃತ ಮಹೋತ್ಸವ ದಿನದ ಅಂಗವಾಗಿ ನಮ್ಮ 1 ಲಕ್ಷದ ಪೊಲೀಸ್ ಅಧಿಕಾರಿಗಳ ಮನೆ ಮೇಲೆ ತಿರಂಗ ಹಾರಿಸಲಾಗುತ್ತದೆ ಎಂದು ಹೇಳಿದ್ದಾರೆ.
ನಾಳೆಯಿಂದ ಹೊಸ ‘GST ದರ’ ಜಾರಿ ; ಯಾವುದು ದುಬಾರಿ.? ಯಾವುದು ಅಗ್ಗ.? ಇಲ್ಲಿದೆ ಮಾಹಿತಿ..!
ಚಂದ್ರು ಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಪ್ರತಿಕ್ರಿಯಿಸಿ, ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣವಾಗಿದೆ. ಚಾರ್ಜ್ ಶೀಟ್ ಬಗ್ಗೆ ನಾನು ಓದಿದ್ದೇನೆ. ಆದ್ರೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿಲ್ಲ. ಚಂದ್ರು ಹತ್ಯೆಗೆ ಭಾಷೆಯೂ ಒಂದು ಕಾರಣ ಅನ್ನೋದು ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಆಗಿದೆ ಎಂದರು.