ಬೆಳಗಾವಿ : ನನ್ನ ರಕ್ತದಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಆರೋಪಕ್ಕೆ ಶಾಸಕ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಪರೀಕ್ಷೆ ಮಾಡಿಸಲಿ ನಾನು ಏನಾದ್ರೂ ಗಾಂಜಾ, ಮದ್ಯಪಾನ ಮಾಡಿರೋಓದು ಸಿಕ್ಕಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ, ಯಾರೇ ಬರಲಿ ನನ್ನ ಜೊತೆ ಕಾಂಪಿಟೇಶನ್ ಗೆ, ಬೆಳಗಾವಿ ತನಕ ಓಡಿ ತೋರಿಸ್ತೀನಿ.ಅವ್ರ ಕೈಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ. ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಅಂತಾ ಎಲ್ಲರಿಗೂ ಗೊತ್ತು ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ವಿರುದ್ಧದ ಅಕ್ರಮ ಆಸ್ತಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ನಾನು ರಾಜಕೀಯಕ್ಕೆ ಬರುವುದಕ್ಕೆ ಮುನ್ನ ಆಸ್ತಿ ವಿವರ ಸಲ್ಲಿಸಿದ್ದೇನೆ. ಅನುಮಾನ ಇರೋರು ಲೋಕಾಯುಕ್ತಕ್ಕೆ ಹೋಗಲಿ. ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ, ಬೇನಾಮಿ ಆಸ್ತಿ ಮಾಡೋದಕ್ಕೆ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದರು.