ಬೆಂಗಳೂರು : ಮಳೆ ಅವಾಂತರಕ್ಕೆ ಕಾಂಗ್ರೆಸ್ ಕಾಲದ ಒತ್ತುವರಿ ಕಾರಣ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
BIGG BREAKING NEWS: ಬಿಜೆಪಿಗೆ ಒಲಿದ ಮೈಸೂರು ಮಹಾನಗರ ಪಾಲಿಕೆಯ ಪಟ್ಟ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಕಾಶ ಜನ ನಿಮಗೆ ಕೊಟ್ಟಿದ್ದಾರೆ ಕೆಲಸ ಮಾಡಿ. ಮಾಡಕ್ಕಾಗಿಲ್ಲ ಅಂದ್ರೆ ಚುನಾವಣೆಗೆ ಹೋಗೋಣ ಬನ್ನಿ, ಕಾಂಗ್ರೆಸ್ ಕಾಲದಲ್ಲಿ ಒತ್ತುವರಿ ಆಗಿದ್ರೆ ಇವರು ತೆರವು ಮಾಡಲಿ. ಇವರಿಗೆ ಆ ಕೆಲಸ ಮಾಡಕ್ಕಾಗದೇ ಮಾತಾಡ್ತಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಇವರಿಗೆ ಅಧಿಕಾರ ಕೊಟ್ಟಾಗ ಮಾಡಕ್ಕಾಗದೇ ಕಾಂಗ್ರೆಸ್ ನಿಂದ ಹಾಳಾಯ್ತು ಅಂತ ಹೇಳೋದಲ್ಲ ಕಿಡಿಕಾರಿದ್ದಾರೆ.
BIGG BREAKING NEWS : ಎಲ್ಲಾ ಮಾದರಿಯ ಕ್ರಿಕೆಟ್ ಗೆ `ಸುರೇಶ್ ರೈನಾ’ ನಿವೃತ್ತಿ ಘೋಷಣೆ
ಕಾಂಗ್ರೆಸ್ ಕಾಲದಲ್ಲಿ ಏನು ಹಾಳಾಯ್ತು ಅಂತ ಹೇಳಲಿ. ನಿಮ್ಮ ಭ್ರಷ್ಟಾಚಾರ, ನಿಮ್ಮ ಸರ್ಕಾರ ಅಧಿಕಾರಿಗಳ ಭ್ರಷ್ಟಾಚಾರದಿಂದ ಹಾಳಾಗಿದೆ ಅಂತ ಸಿಎಂ ಗಮನದಲ್ಲಿಟ್ಟುಕೊಳ್ಳಲಿ. ಅವಕಾಶ ಜನ ನಿಮಗೆ ಕೊಟ್ಟಿದ್ದಾರೆ ಕೆಲಸ ಮಾಡಿ. ಮಾಡಕ್ಕಾಗಿಲ್ಲ ಅಂದ್ರೆ ಚುನಾವಣೆಗೆ ಹೋಗೋಣ ಬನ್ನಿ ಎಂದು ಸವಾಲ್ ಹಾಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದ ಅವಧಿಯಲ್ಲಿನ ದುರಾಡಳಿತವೇ ಬೆಂಗಳೂರು ನಗರದ ಈಗಿನ ದುಸ್ಥಿತಿಗೆ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು.