ಬೆಂಗಳೂರು : ಬೆಂಗಳೂರಿನಲ್ಲಿ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಅಕ್ರಮದಲ್ಲಿ ಕಾಂಗ್ರೆಸ್ ನವರದೇ ಕೈವಾಡ ಇದೆ ಎಂದು ಸಚಿವ ಅಶ್ವಥ್ ನಾರಾಯಣ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟರ್ ಐಡಿ ಪ್ರಕರಣರಣ ಸಂಬಂಧ ಪೋಲಿಸರು ತನಿಖೆ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ತನಿಖೆ ಮಾಡ್ತಿಲ್ಲ. ಅದರೆ, ಪ್ರತಿದಿನ ಇವರೇ ತನಿಖೆ ಮಾಡೋ ರೀತಿ ಬಿಲ್ಡಪ್ ಕೊಡ್ತಾ ಇದ್ದಾರಲ್ಲ, ಎಲ್ಲಿಂದ ಇವರಿಗೆ ಮಾಹಿತಿ ಸಿಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.
ಪ್ರಕರಣದಲ್ಲಿ ಪೋಲಿಸರು ಮುಕ್ತವಾಗಿ ತನಿಖೆ ಮಾಡುತ್ತಿದ್ದಾರೆ. ತನಿಖೆಯಲ್ಲಿ ಯಾರು ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಹಗರಣದಲ್ಲಿ ಕಾಂಗ್ರೆಸ್ ನವರದ್ದೇ ಕೈವಾಡ ಇರುತ್ತದೆ, ನನಗೆ ಗೊತ್ತು. ಮತದಾರರ ಮಾಹಿತಿ ಕಳ್ಳತನ ವಿಚಾರಕ್ಕೆ ಚುನಾವಣೆ ಆಯೋಗ ಕ್ರಮಕೈಗೊಳ್ಳುತ್ತದೆ. ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
BIGG NEWS : 20ನೇ ಶತಮಾನದ ಶ್ರೇಷ್ಠ ನಕ್ಷಾಪ್ರವೀಣೆ ಮೇರಿ ಥಾರ್ಪ್ಗೆ ‘ಗೂಗಲ್ ಡೂಡಲ್’ ಗೌರವ | Marie Tharp