ಬೆಂಗಳೂರು : ರಾಜ್ಯ ಸರ್ಕಾರ ಕೋವಿಡ್ನಿಂದ ಮೃತರಾದವರ ಸಮಾಧಿಗಳ ಮೇಲೆ ಬಿಜೆಪ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ ಎಂದು ಬಿಜೆಪಿ ಜನಸ್ಪಂದನ ಸಮಾವೇಶದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಹೈದರಾಬಾದ್: ಈ ವರ್ಷ 24.64 ಲಕ್ಷ ರೂ. ಗೆ ಸೇಲಾಯ್ತು ʻಬಾಲಾಪುರ ಗಣೇಶ ಲಡ್ಡುʼ… ಏನಿದರ ವಿಶೇಷತೆ?
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರ ಕೋವಿಡ್ನಿಂದ ಮೃತರಾದವರ ಸಮಾಧಿಗಳ ಮೇಲೆ ಬಿಜೆಪ ಭ್ರಷ್ಟೋತ್ಸವ ನಡೆಸಲು ಮುಂದಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನಸ್ಪಂದನ ಸಮಾವೇಶದ ಖರ್ಚು ವೆಚ್ಚದ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಸುಧಾಕರ್ ಅವರು ಕೋವಿಡ್ ಹೆಣಗಳ ಮೇಲೆ ಮಾಡಿದ ಹಣವನ್ನು ಇಲ್ಲಿ ಚೆಲ್ಲುತ್ತಿದ್ದಾರೆ. ಈ ಸಮಾವೇಶಕ್ಕೆ ಕೋವಿಡ್ ಮೃತರ ಶಾಪ ತಟ್ಟುವುದು ನಿಶ್ಚಿತ ಎಂದು ಕಿಡಿಕಾರಿದೆ.
Bigg Breaking News: ಮಂಗಳೂರು ನಗರ ಪಾಲಿಕೆ ಚುನಾವಣೆ; ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್ ಸ್ಥಾನ
ನಿನ್ನೆ ರಾತ್ರಿ ಮುಖ್ಯಮಂತ್ರಿಗಳು ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದರಂತೆ! ಹಗಲಲ್ಲೇ ಕಾಣದಿರುವುದು ರಾತ್ರಿ ಏನು ಕಾಣುತ್ತದೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಹಗಲೀಡಿ ಬಿಜೆಪಿ ಭ್ರಷ್ಟೋತ್ಸವದ ಕೆಲಸ, ರಾತ್ರಿ ಕಾಟಾಚಾರದ ಭೇಟಿಯೇ? ನಿಮ್ಮ ಮಂತ್ರಿಗಳೆಲ್ಲ ಎಲ್ಲಿ ಹೋದರು? ಬರೀ ವೀಕ್ಷಣೆ ಮಾಡುವ ಬದಲು ಪರಿಹಾರದ ಪ್ಯಾಕೇಜ್ ಘೋಷಿಸುವುದು ಯಾವಾಗ? ಎಂದು ಪ್ರಶ್ನಿಸಿದೆ.
ಆತ್ಮಹತ್ಯೆಗಳಿಗೆ ಆರ್ಥಿಕ ಅಸ್ಥಿರತೆ, ಭವಿಷ್ಯದ ಬಗೆಗಿನ ಅತಂತ್ರ ಭಾವ, ನಿರುದ್ಯೋಗದ ಆತಂಕ, ಸಾಮಾಜಿಕ ವ್ಯವಸ್ಥೆಗಳು ಪ್ರಮುಖ ಕಾರಣವಾಗುತ್ತವೆ. ಆತ್ಮಹತ್ಯೆಯಲ್ಲಿ ಕರ್ನಾಟಕವು 5ನೇ ಸ್ಥಾನಕ್ಕೆ ಏರಿರುವುದಕ್ಕೆ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತವೇ ನೇರ ಕಾರಣ. ಈ ಸಂತೋಷಕ್ಕಾಗಿ ಬಿಜೆಪಿ ಭ್ರಷ್ಟೋತ್ಸವ ನಡೆಸುತ್ತಿರುವುದೇ ? ಎಂದು ವಾಗ್ದಾಳಿ ನಡೆಸಿದೆ.