ಬೆಂಗಳೂರು : ರಾಜ್ಯದಿಂದ ಕಾಶಿಯಾತ್ರೆಗೆ ಹೋಗುವವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಕಾಶಿಯಾತ್ರೆಗೆ ಹೋಗುವವರಿಗೆ ಸಹಾಯಧನ ವರ್ಗಾವಣೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಡಿಬಿಟಿ ಮತ್ತು ಆನ್ ಲೈನ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1.30 ಕ್ಕೆ ಕಾಶಿಯಾತ್ರೆಗೆ ಹೋಗುವ ಯಾತ್ರಾರ್ಥಿಗಳಿಗೆ ಸಹಾಯಧನ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ.
Big news: ನೇಪಾಳದ ಸಂಸತ್ತಿನಲ್ಲಿ ʻಮೊದಲ ಪೌರತ್ವ ತಿದ್ದುಪಡಿ ಮಸೂದೆʼ ಅಂಗೀಕಾರ!
7 ದಿನಗಳ ಪ್ರವಾಸಕ್ಕೆ ಅಂದಾಜು 15 ಸಾವಿರ ರೂಪಾಯಿ ವೆಚ್ಚವಾಗಲಿದ್ದು, ಇದರಲ್ಲಿ 5 ಸಾವಿರ ರೂಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕೊಂಡೊಯ್ಯುವ ಭಾರತ್ ಗೌರವ್ ರೈಲನ್ನು ಸಿದ್ದಪಡಿಸಲು ಅನುಮತಿ ನೀಡಿದೆ.