ಹಾವೇರಿ : ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 25 ರ ಗುರುವಾರ ಮಧ್ಯಾಹ್ನ 3 ಗಂಟೆಗೆ ರಾಣೇಬೆನ್ನೂರಿಗೆ ಆಗಮಿಸಿ, ರೂ.51.90 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
2020-21ನೇ ಸಾಲಿನ ರಾಜ್ಯದ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 4 ಘಟ್ಟ 2ರಡಿ ರೂ.22 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಾಣೇಬೆನ್ನೂರ- ಬಿಸಲಹಳ್ಳಿ ರಸ್ತೆ, ರಾಣೇಬೆನ್ನೂರ-ಮುದೇನೂರ ವ್ಹಾಯಾ ಮಾಗೋಡ-ಇಟಗಿ ಸರಪಳಿ ರಸ್ತೆ, ಅರೇಮಲ್ಲಾಪೂರ-ಕುದರಿಹಾಳ-ಮೆಡ್ಲೇರಿ, ಉದಗಟ್ಟಿ, ಹೀಲದಹಳ್ಳಿ ರಸ್ತೆ, ಅಪೆಂಡಿಕ್ಸ್ ಇ ರಾಜ್ಯ ಹೆದ್ದಾರಿ ಸುಧಾರಣೆ ಯೋಜನೆಯಡಿ ರೂ. 10 ಕೋಟಿ ವೆಚ್ಚದಲ್ಲಿ ಬೀರೂರ-ಸಮ್ಮಸಗಿ ಚತುಸ್ಪಥ ಕಾಂಕ್ರೇಟ್ ರಸ್ತೆ ನಿರ್ಮಾಣ, ರೂ.8 ಕೋಟಿ ವೆಚ್ಚದಲ್ಲಿ ಅಪೆಂಡಿಕ್ಸ್ ಇ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಯೋಜನೆ ಮಾಳನಾಯಕನಹಳ್ಳಿ-ಹರಿಹರ-ಸಮ್ಮಸಗಿ- ನಿಟವಳ್ಳಿ-ಕೊಟ್ರಿಹಾಳ-ಲಿಂಗದಹಳ್ಳಿ-ಅಂತರವಳ್ಳಿ ಆಯ್ದ ರಸ್ತೆಗಳ ಸುಧಾರಣೆ ಕಾಮಗಾರಿ ಹಾಗೂ ರೂ.4.90 ಕೋಟಿ ವೆಚ್ಚದಲ್ಲಿ ರಾಣೇಬೆನ್ನೂರ ಪಟ್ಟಣ ಪರಿಮಿತಿಯಲ್ಲಿ ಹಾದುಹೋಗಿರುವ ಹಳೆಯ ರಾಷ್ಟ್ರೀಯ ಹೆದ್ದಾರಿ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ರೂ.32 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ 55 ವಿವಿಧ ರಸ್ತೆ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಹಾಗೂ ಸಣ್ಣ ನೀರಾವರಿ ಹಾಗೂ ಅಂತಜಲ ಅಭಿವೃದ್ಧಿ ಇಲಾಖೆಯಡಿ ಹಿರೇಮಾಗನೂರ, ನಿಟ್ಟೂರ, ಹಿರೇಮಾಗನೂರ, ಗೋಡಿಹಾಳ, ಲಿಂಗದಹಳ್ಳಿ, ಮುಷ್ಟೂರ ಮತ್ತು ಹಳೇ ಆನ್ವೇರಿ ಗ್ರಾಮಗಳ ಹತ್ತಿರ ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬಿಡ್ಜ ಕಂ ಬ್ಯಾರೇಜ್ಗಳಿಗೆ ಹೊಸ ಗೇಟ್ಗಳ ಅಳವಡಿಕೆ ಹಾಗೂ ದುರಸ್ತಿ ಕಾಮಗಾರಿ ಮತ್ತು ದಂಡಗಿಹಳ್ಳಿ,ಆರೋಕೊಪ್ಪ, ಹಲಗೇರಿ ಗ್ರಾಮಗಳ ಹತ್ತಿರ ಬಾಂದಾರ ನಿರ್ಮಾಣ ಕಾಮಗಾರಿ, ಅಂತರವಳ್ಳಿ ಕೆರೆ ಬಂಡ್ ಹಾಗೂ ಟೇಲ್ ಚಾನಲ್ ಪುನರುಜ್ಜೀವ ಕಾಮಗಾರಿಗಳು ಕೈಗೊಂಡು 600 ಹೆಕ್ಟೇರ್ ಪ್ರದೇಶಕ್ಕೆ ನೀರೊದಗಿರುವ ರೂ.7 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಒಂಭತ್ತು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರವಾಸ ವಿವರ: ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆಗಸ್ಟ್ 25ರ ಗುರುವಾರ ಮಧ್ಯಾಹ್ನ 1-30ಕ್ಕೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ನಲ್ಲಿ ಹೊರಟು, ಮಧ್ಯಾಹ್ನ 3 ಗಂಟೆಗೆ ರಾಣೇಬೆನ್ನೂರು ತಾಲೂಕು ಹೂಲಿಹಳ್ಳಿ ಹೆಲಿಪ್ಯಾಡ್ಗೆ ಆಗಮಿಸಿ, ರಾಣೇಬೆನ್ನೂರ ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ 4-30ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಮಾರಂಭದಲ್ಲಿ ಕೇಂದ್ರ ಕಲ್ಲಿದ್ದಲು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ ಪಾಟೀಲ, ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ, ಹಾವೇರಿ ವಿಧಾನಸಭಾ ಶಾಸಕ ನೆಹರು ಓಲೇಕಾರ ಉಪಸ್ಥಿತರಿರುವರು. ರಾಣೆಬೆನ್ನೂರು ವಿಧಾನಸಭಾ ಶಾಸಕ ಅರುಣಕುಮಾರ ಗುತ್ತೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ ಬಣಕಾರ, ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಶಾಸಕರಾದ ಬಸವರಾಜ ಹೊರಟ್ಟಿ, ಎಸ್. ವಿ ಸಂಕನೂರ, ಪ್ರದೀಪ ಶೆಟ್ಟರ್, ಬ್ಯಾಡಗಿ ವಿಧಾನಸಭಾ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ವಿಧಾನ ಪರಿಷತ್ ಶಾಸಕ ಆರ್.ಶಂಕರ, ಹಾನಗಲ್ ವಿಧಾನಸಭಾ ಶಾಸಕ ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಶಾಸಕ ಸಲೀಂ ಅಹ್ಮದ್, ನಗರಸಭೆ ಅಧ್ಯಕ್ಷೆ ಶ್ರೀಮತಿ ರೂಪಾ ಚಿನ್ನಿಕಟ್ಟಿ ಭಾಗವಹಿಸಲಿದ್ದಾರೆ