ಬೆಂಗಳೂರು : ಭೋವಿ ಸಮುದಾಯದ ಮತ್ತಷ್ಟು ಅಭಿವೃದ್ಧಿಗಾಗಿ ಭೂಮಿ ನೀಡಬೇಕೆಂಬ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ನೆರವು ನೀಡಲಿದೆ. ಇಂತಹ ಸಂಘಗಳಿಗೆ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಣಿ ಎಲಿಜಬೆತ್ II ಅಂತಿಮ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸಂತಾಪ ಸೂಚಕ ಪುಸ್ತಕಕ್ಕೆ ಸಹಿ
ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ನಮ್ಮ ಸರ್ಕಾರ ನಿಮ್ಮ ಕಸಬಿಗೆ ಏನೇನು ಕಾನೂನು ಅಡಚಣೆಯಿದೆ. ಅದನ್ನು ದೂರ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ. ನಿಮ್ಮ ಮಕ್ಕಳಿಗೆ ಈಗಾಗಲೇ ವಿದ್ಯಾವೇತನ ನೀಡಲಾಗುತ್ತಿದೆ. ವಸತಿ ನಿಲಯಗಳ ನಿರ್ಮಾಣವಾಗಿದೆ. ಈ ವರ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ 100 ಹೊಸ ವಸತಿ ನಿಲಯಗಳನ್ನು ಮಾಡುತ್ತಿದ್ದೇವೆ. 1000 ಮಕ್ಕಳು ಇರುವಂತಹ 5 ಮೆಗಾ ವಸತಿ ನಿಲಯ ಕೂಡ ನಿರ್ಮಾಣ ಆಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿದೇಶಕ್ಕೆ ತೆರಳುವವರಿಗೆ ಹಣಕಾಸಿನ ನೆರವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಕಲ್ಲು ಒಡೆಯುವವರಿಂದ ಹಿಡಿದು, ಬಡಿಗೇರರು, ಕುಂಬಾರರು, ವಿಶ್ವಕರ್ಮ ಮತ್ತಿತರ ಕುಶಲ ಕರ್ಮಿಗಳೆಲ್ಲರಿಗೂ 50 ಸಾವಿರ ರೂ. ಸಾಲ/ಸಬ್ಸಿಡಿ ಯೋಜನೆ ರೂಪಿಸುತ್ತಿದ್ದೇವೆ. ಬಡವರಿಗೆ ಮತ್ತು ದುಡಿಯುವ ವರ್ಗದ ಮಕ್ಕಳಿಗೆ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.