ನವದೆಹಲಿ : ಭಾರತ ಸರ್ಕಾರಕ್ಕೆ ಹೆದರಿ, ಚೀನಾದ ಬ್ರಾಂಡ್ಗಳಾದ ಶಿಯೋಮಿ, ವಿವೋ ಮತ್ತು ಒಪ್ಪೋ ಅಗ್ಗದ ಸ್ಮಾರ್ಟ್ಫೋನ್ ಮಾರುಕಟ್ಟೆಯಿಂದ ತಮ್ಮನ್ನ ದೂರವಿಡಲು ಪ್ರಾರಂಭಿಸಿವೆ. ವಾಸ್ತವವಾಗಿ, ಭಾರತದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೀನೀ ಫೋನ್ಗಳನ್ನ ಸರ್ಕಾರ ನಿಷೇಧಿಸಬಹುದು ಎಂದು ಇತ್ತೀಚೆಗೆ ವರದಿಯಾಗಿತ್ತು. ಆದಾಗ್ಯೂ, ಇದರ ನಂತ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್ಗಳ ಮೇಲಿನ ನಿಷೇಧವನ್ನ ನಿರಾಕರಿಸಿದರು. ಆದ್ರೆ, ಚೀನಾದ ಬ್ರಾಂಡ್ ಮತ್ತು ಸರ್ಕಾರದ ನಡುವಿನ ವಿವಾದದ ಪರಿಣಾಮವು ಕಂಪನಿಗಳ ನಿರ್ಧಾರದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿ ಈಗ ಈ ಚೀನೀ ಕಂಪನಿಗಳು 10,000 ರೂ.ಗಿಂತ ಕಡಿಮೆ ಬೆಲೆಯ ಫೋನ್ʼಗಳ ಬಿಡುಗಡೆಯನ್ನ ಕಡಿಮೆ ಮಾಡಿವೆ.
ಚೀನಾದ ಕಂಪನಿಗಳೊಂದಿಗೆ, ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಈ ವರ್ಷ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಕೇವಲ ಒಂದು ಫೋನ್ ಮಾತ್ರ ಬಿಡುಗಡೆ ಮಾಡಿದೆ. ಅದೇ ಸಮಯದಲ್ಲಿ, ಶಿಯೋಮಿಯ ಪ್ರವೇಶ-ಮಟ್ಟದ ವಿಭಾಗವು ಸುಮಾರು 12 ಪ್ರತಿಶತದಷ್ಟು ಇಳಿಕೆಯನ್ನ ಕಂಡಿದೆ. ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ (IDC)ನ ಅಂಕಿ-ಅಂಶಗಳ ಪ್ರಕಾರ, ಶಿಯೋಮಿಯ 7,500 ರೂ.ಗಳ ವಿಭಾಗದ ಷೇರುಗಳು ಶೇಕಡಾ 28 ರಿಂದ ಶೇಕಡಾ 25ಕ್ಕೆ ಇಳಿದಿವೆ. 10 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ʼಗಳ ಮಾರುಕಟ್ಟೆ ಪಾಲು ಸಹ ಕುಸಿದಿದೆ.
ಶಿಯೋಮಿಯ ಮಾರುಕಟ್ಟೆ ಪಾಲು 2015ರಲ್ಲಿ ಶೇಕಡಾ 84ರಿಂದ ಈಗ ಶೇಕಡಾ 35ಕ್ಕೆ ಇಳಿದಿದೆ. 10 ರಿಂದ 20 ಸಾವಿರ ಸ್ಮಾರ್ಟ್ಫೋನ್ ವಿಭಾಗದಲ್ಲಿ, ಕಂಪನಿಯು 45 ಪ್ರತಿಶತದಷ್ಟು ಕ್ಯಾಪ್ಚರ್ʼನ್ನ ಸಾಧಿಸಿದೆ, ಇದು 2015ರಲ್ಲಿ ಕೇವಲ 13 ಪ್ರತಿಶತದಷ್ಟಿತ್ತು. ಈ ವರ್ಷ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಈ ಕಂಪನಿಗಳು ಇಲ್ಲಿಯವರೆಗೆ ಕೇವಲ 39 ಸ್ಮಾರ್ಟ್ಫೋನ್ʼಗಳನ್ನ ಬಿಡುಗಡೆ ಮಾಡಿವೆ, ಇದು ಕಳೆದ ವರ್ಷದ 60 ಫೋನ್ ಬಿಡುಗಡೆಗಳಿಗಿಂತ ತುಂಬಾ ಕಡಿಮೆಯಾಗಿದೆ.
ಅಗ್ಗದ ಚೀನೀ ಫೋನ್ ನಿಷೇಧಿಸುವ ಸುದ್ದಿ ಇತ್ತು.!
ಕೆಲವು ದಿನಗಳ ಹಿಂದೆ ಭಾರತದಲ್ಲಿ, ಚೀನಾದ ಮೊಬೈಲ್ ಕಂಪನಿಗಳ ಮೇಲೆ ಕ್ರಮದ ಸುದ್ದಿ ಇತ್ತು. 12,000 ರೂ.ಗಿಂತ ಕಡಿಮೆ ಬೆಲೆಯ ಚೀನೀ ಫೋನ್ʼಗಳನ್ನ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯನ್ನು ಬ್ಲೂಮ್ಬರ್ಗ್ ಬಿಡುಗಡೆ ಮಾಡಿದ್ದು, ಲಾವಾ, ಮೈಕ್ರೋಮ್ಯಾಕ್ಸ್ನಂತಹ ದೇಶೀಯ ಕಂಪನಿಗಳನ್ನ ಉತ್ತೇಜಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ನಿರಾಕರಿಸಿತ್ತು.!
ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಫೋನ್ಗಳ ಮೇಲಿನ ನಿಷೇಧವನ್ನು ನಿರಾಕರಿಸಿದ್ದರು. ಚೀನಾದ ಕಂಪನಿಗಳ ಈ ಫೋನ್ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನ ಸರ್ಕಾರ ಇನ್ನೂ ಮಾಡಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದರು. ಭಾರತೀಯ ಬ್ರಾಂಡ್ ಉತ್ತೇಜಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಅನ್ಯಾಯದ ವ್ಯಾಪಾರ ಅಭ್ಯಾಸಗಳಿಂದಾಗಿ, ಭಾರತೀಯ ಸ್ಮಾರ್ಟ್ಫೋಣ್ ಬ್ರಾಂಡ್ ಬಹಿಷ್ಕರಿಸಿದ್ರೆ, ನಾವು ಮಧ್ಯಪ್ರವೇಶಿಸಿ ಪರಿಹರಿಸುತ್ತೇವೆ.