ನವದೆಹಲಿ : ಭಾರತದ ಸ್ಟಾರ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಇಂದು ಅರ್ಜುನ ಪ್ರಶಸ್ತಿ ಸ್ವೀಕಾರಿದ್ದಾರೆ. ಪಂದ್ಯದಲ್ಲಿ ನಿರತರಾಗಿದ್ದರಿಂದ ಸನ್ಮಾನ ಸಮಾರಂಭಕ್ಕೆ ಬರಲಾಗಲಿಲ್ಲ. ಇದರಿಂದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಶನಿವಾರ ಪ್ರಶಸ್ತಿ ವಿತರಿಸಿದರು.
ಶನಿವಾರ ಪ್ರಶಸ್ತಿ ಸ್ವೀಕರಿಸಿದ ಬಳಿಕ ಟ್ವೀಟ್ ಮಾಡಿರುವ ಚೇತೇಶ್ವರ ಪೂಜಾರ, “ಅರ್ಜುನ ಪ್ರಶಸ್ತಿಯನ್ನ ಸಂಘಟಿಸಿ ಪ್ರದಾನ ಮಾಡಿದ್ದಕ್ಕಾಗಿ ಭಾರತ ಕ್ರೀಡೆ, ಬಿಸಿಸಿಐ ಮತ್ತು ಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ಪಂದ್ಯದಲ್ಲಿ ನಿರತರಾಗಿದ್ದರಿಂದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, ಗೌರವಕ್ಕೆ ಧನ್ಯವಾದಗಳು” ಎಂದಿದ್ದಾರೆ.
Thankful to @IndiaSports, @BCCI and @ianuragthakur to organise and handover the Arjuna Award belatedly, which I could not collect the year it was awarded to me due to my cricket commitments. Honoured and grateful🙏 pic.twitter.com/Dokz4ZP3Hs
— Cheteshwar Pujara (@cheteshwar1) November 19, 2022
ಸೌರಾಷ್ಟ್ರ ಪರ ದೇಶೀಯ ಕ್ರಿಕೆಟ್
ಸೌರಾಷ್ಟ್ರ ಪರ ದೇಶೀಯ ಕ್ರಿಕೆಟ್ ಆಡುತ್ತಿರುವ ಪೂಜಾರ ವಿಜಯ್ ಹಜಾರೆ ಟ್ರೋಫಿಗಾಗಿ ದೆಹಲಿಯಲ್ಲಿದ್ದಾರೆ. ಅವರು ಮುಂದಿನ ತಿಂಗಳು ನೆರೆಯ ದೇಶದಲ್ಲಿ ಎರಡು ಟೆಸ್ಟ್ಗಳ ಸರಣಿಗಾಗಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿರುವ ಭಾರತ “ಎ” ತಂಡದ ಭಾಗವಾಗಲಿದ್ದಾರೆ. 96 ಟೆಸ್ಟ್ ಪಂದ್ಯಗಳನ್ನ ಆಡಿರುವ ಪೂಜಾರ, ಕೌಂಟಿ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ ಭಾರತ ತಂಡಕ್ಕೆ ಪುನರಾಗಮನ ಮಾಡಿದರು.
ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ
2010ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಚೇತೇಶ್ವರ ಪೂಜಾರ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು ಎಂಬುದನ್ನ ಗಮನಿಸಬಹುದು. ಪಾದಾರ್ಪಣೆ ಬಳಿಕ ಪೂಜಾರ ಮೊದಲ ಇನ್ನಿಂಗ್ಸ್ನಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾದರು. ಇದಾದ ಬಳಿಕ ಮತ್ತೆ ವಾಪಸಾದಾಗ ಭಾರತ ಪರ ಅದ್ಭುತ ಇನ್ನಿಂಗ್ಸ್ ಆಡಿದರು. ಭಾರತದ ಪರ 96 ಟೆಸ್ಟ್ ಪಂದ್ಯಗಳ 164 ಇನ್ನಿಂಗ್ಸ್ಗಳಲ್ಲಿ ಪೂಜಾ 6792 ರನ್ ಗಳಿಸಿದ್ದಾರೆ. ಈ ಪೈಕಿ, ಹೈದರಾಬಾದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ 206 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಸಧ್ಯ ಅವರು ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ.
BREAKING NEWS : ‘ಶಂಕಿತ ಉಗ್ರನಿಂದ ಬೇರೆ ಕಡೆ ಬಾಂಬ್ ಸ್ಪೋಟಿಸಲು ಸಂಚು ’ : ಎಡಿಜಿಪಿ ಅಲೋಕ್ ಕುಮಾರ್
‘ಚುಮು..ಚುಮು’ ಚಳಿಯಲ್ಲಿರುವ ರಾಜ್ಯದ ಜನತೆಗೆ ಬಿಗ್ ಶಾಕ್ : ನ.22 ರಿಂದ ವರುಣನ ಆರ್ಭಟ |Rain Alert