ನವದೆಹಲಿ : ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳನ್ನ ನಿಲ್ಲಿಸಲು ಸರ್ಕಾರ ಯೋಜಿಸಿದೆ. ಈಗ ಶೀಘ್ರದಲ್ಲೇ ನೀವು ಖರೀದಿಸಿದ ಔಷಧಿ ನಕಲಿಯೇ? ಎಂದು ಪರಿಶೀಲಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ನಕಲಿ ಔಷಧಿಗಳ ಸಮಸ್ಯೆಯನ್ನ ನಿಭಾಯಿಸಲು, ಔಷಧ ಉತ್ಪಾದನಾ ಕಂಪನಿಗಳು 300 ಔಷಧಿಗಳ ಪ್ಯಾಕೆಟ್ ಮೇಲೆ ‘ಬಾರ್ ಕೋಡ್’ ಕಡ್ಡಾಯಗೊಳಿಸುವ ಪ್ರಕ್ರಿಯೆಯನ್ನ ಸರ್ಕಾರ ಅಂತಿಮಗೊಳಿಸಲಿದೆ.
ಮುಂದಿನ ವರ್ಷದ ಮೇ ತಿಂಗಳಿನಿಂದ ಔಷಧಗಳು ಮತ್ತು ಕಾಸ್ಮೆಟಿಕ್ ನಿಯಮಗಳು ಜಾರಿಗೆ ಬರಲಿವೆ.
ಪ್ಯಾಕೆಟ್ ಮೇಲೆ ಮುದ್ರಿಸಲಾದ ಬಾರ್ ಕೋಡ್’ನ್ನ ಸ್ಕ್ಯಾನ್ ಮಾಡುವುದರಿಂದ ಉತ್ಪಾದನಾ ಪರವಾನಗಿ ಮತ್ತು ಬ್ಯಾಚ್ ಸಂಖ್ಯೆಯಂತಹ ಮಾಹಿತಿಯನ್ನ ಕಂಡು ಹಿಡಿಯಬಹುದು. 1945ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ ನಿಯಮಗಳ ತಿದ್ದುಪಡಿಯು ಮುಂದಿನ ವರ್ಷದ ಮೇ ತಿಂಗಳಿನಿಂದ ಜಾರಿಗೆ ಬರಲಿದೆ.
ಪಟ್ಟಿಯಲ್ಲಿ ಉಲ್ಲೇಖಿಸಲಾದ ಔಷಧಗಳಲ್ಲಿ ಹೆಚ್ಚಿನ ಭಾಗವು ಹೆಚ್ಚಿನ ಜನರು ಅಂಗಡಿಯಿಂದ ನೇರವಾಗಿ ಖರೀದಿಸುವಂತಿದೆ, ಇದರಿಂದಾಗಿ ನಕಲಿ ಔಷಧಿಗಳ ಬಳಕೆಯ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ. ನಕಲಿ ಔಷಧಿಗಳ ಪೂರೈಕೆಯನ್ನು ನಿಲ್ಲಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಸುಧಾರಣೆಯನ್ನ ಖಚಿತಪಡಿಸಿಕೊಳ್ಳುವುದು ಈ ತಿದ್ದುಪಡಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಇನ್ನು ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಔಷಧವು ನಿಜವೇ ಅಥವಾ ಅಲ್ಲವೇ ಎಂದು ತಿಳಿಯುತ್ತದೆ. “ಬಾರ್ ಕೋಡ್ ಅಥವಾ ಕ್ಯೂಆರ್ ಕೋಡ್ ಔಷಧವು ನೈಜವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಮೂಲಗಳು ತಿಳಿಸಿವೆ.
ಪ್ರಕ್ರಿಯೆಯನ್ನ ಅಂತಿಮಗೊಳಿಸಲಾಗುತ್ತಿದೆ.!
ಅವಲೋಕನಗಳು ಮತ್ತು ಚರ್ಚೆಗಳ ಆಧಾರದ ಮೇಲೆ, ಸಚಿವಾಲಯವು ಅದನ್ನ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಮೊದಲ ಹಂತದಲ್ಲಿ, 300 ಔಷಧಿಗಳನ್ನ ಈ ವ್ಯಾಪ್ತಿಗೆ ತರಲಾಗುವುದು, ಇದು ಉನ್ನತ ಔಷಧ ಬ್ರಾಂಡ್ನ ಒಟ್ಟು ಮಾರುಕಟ್ಟೆ ಪಾಲಿನ ಸುಮಾರು 35 ಪ್ರತಿಶತದಷ್ಟು ಪಾಲನ್ನ ಹೊಂದಿದೆ ಮತ್ತು ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಎಲ್ಲಾ ಔಷಧಿಗಳನ್ನು ಅದರ ವ್ಯಾಪ್ತಿಗೆ ತರಬಹುದು.
SHOCKING NEWS: ನಾಯಿಗೆ ಆಹಾರ ಹಾಕದಿದ್ಕೆ ಸೋದರ ಸಂಬಂಧಿಯನ್ನೇ ಹೊಡೆದು ಕೊಂದ ವ್ಯಕ್ತಿ ಅರೆಸ್ಟ್